ಸಲೂನ್ ನಡೆಸುತ್ತಿರುವ ವ್ಯಕ್ತಿ ಬಳಿ ಎಷ್ಟು ಕಾರಿರಲು ಸಾಧ್ಯ? ಹೆಚ್ಚೆಂದ್ರೆ ಒಂದು ಕಾರ್ ಖರೀದಿ ಮಾಡೋದು ಕಷ್ಟ. ಆದ್ರೆ ಬೆಂಗಳೂರಿನ ರಮೇಶ್ ಬಾಬು ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ 378 ಕಾರುಗಳಿವೆ.
ರಾಯಲ್ ರೈಸ್, ಆಡಿ, ಬಿಎಂಡಬ್ಲ್ಯು ಮತ್ತು ಜಾಗ್ವಾರ್ ಸೇರಿದಂತೆ ಐಷಾರಾಮಿ ಕಾರುಗಳು ಇದ್ರಲ್ಲಿ ಸೇರಿವೆ.
ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದರೂ, ರಮೇಶ್ ಬಾಬು ಸಲೂನ್ ಕೆಲಸ ಬಿಟ್ಟಿಲ್ಲ. ಗ್ರಾಹಕರಿಂದ 150 ರೂಪಾಯಿ ಪಡೆಯುತ್ತಾರೆ. ರಮೇಶ್ ಬಾಬು 1993 ರಲ್ಲಿ ಮೊದಲ ಕಾರು ಖರೀದಿಸಿದ್ದರು. ವೈಯಕ್ತಿಕ ಬಳಕೆಗಾಗಿ 1993 ರಲ್ಲಿ ಮಾರುತಿ ಓಮ್ನಿ ವ್ಯಾನ್ ಖರೀದಿಸಿದ್ದರು. ಸಾಲ ಪಡೆದು ಕಾರ್ ಖರೀದಿ ಮಾಡಿದ್ದರು. ಕಂತು ಕಟ್ಟಲು ಅವ್ರ ಬಳಿ ಹಣವಿರಲಿಲ್ಲ. ನಂದಿನಿ ಹೆಸರಿನ ಅವ್ರ ಚಿಕ್ಕಮ್ಮನ ಸಲಹೆ ಮೇರೆಗೆ ರಮೇಶ್ ಬಾಬು, ಕಾರನ್ನು ಬಾಡಿಗೆಗೆ ಬಿಟ್ಟರು. ಸಲೂನ್ ಜೊತೆ ಕಾರು ಬಾಡಿಗೆ ವ್ಯವಹಾರ ಶುರು ಮಾಡಿದ ಅವ್ರ ಬಳಿ ಈಗ 378 ಕಾರುಗಳಿವೆ.
ಬಾಲ್ಯದಲ್ಲಿ ಪೇಪರ್ ಹಾಕುವ ಕೆಲಸ ಮಾಡ್ತಿದ್ದ ರಮೇಶ್ ಬಡತನದಲ್ಲಿಯೇ ಬೆಳೆದರಂತೆ. ರಮೇಶ್ ಬಾಬು ಶೀಘ್ರದಲ್ಲೇ ಸ್ಟ್ರೆಚ್ ಲಿಮೋಸಿನ್ ಕಾರನ್ನು ಖರೀದಿಸಲು ಬಯಸಿದ್ದಾರೆ, ಈ ಕಾರಿನ ಬೆಲೆ ಸುಮಾರು 8 ಕೋಟಿ ರೂಪಾಯಿ.