ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವ ಬಿಸ್ಕೆಟ್‌ಗಳ ಬಗ್ಗೆ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಈ ಬಿಸ್ಕೆಟ್‌ಗಳು ಚಾಕಲೇಟ್‌ಗಿಂತಲೂ ಹೆಚ್ಚು ಹಾನಿಕಾರಕವಾಗಿವೆ. ಸಾಮಾನ್ಯವಾಗಿ ಹೆಚ್ಚಿನ ಜನರು ವಾರಕ್ಕೆ ಒಂದು ಅಥವಾ ಎರಡು ಬಾರಿ ಚಾಕಲೇಟ್ ತಿನ್ನುತ್ತಾರೆ, ಆದರೆ ಪ್ರತಿದಿನ ಬಿಸ್ಕತ್ತುಗಳನ್ನು ಸೇವನೆ ಮಾಡುತ್ತಾರೆ. ಬೆಳಗ್ಗೆ ಎರಡು ಮತ್ತು ಸಂಜೆ ಎರಡು ಬಿಸ್ಕತ್ತುಗಳನ್ನು ತಿನ್ನುವ ಅಭ್ಯಾಸ ಅನೇಕರಿಗೆ ಇರಬಹುದು. ಈ ಮೂಲಕ ವಾರಕ್ಕೆ 28 ಬಿಸ್ಕತ್ತುಗಳನ್ನು ತೆಗೆದುಕೊಂಡಂತಾಯಿತು. ಈ ಬಿಸ್ಕೆಟ್‌ಗಳಲ್ಲಿ ಮೈದಾ, ಸಕ್ಕರೆ ಮತ್ತು ತಾಳೆ ಎಣ್ಣೆಯಿರುತ್ತದೆ.
ಬೌರ್ಬನ್ ಮತ್ತು ಜಿಮ್ ಜಾಮ್‌ನಂತಹ ಬಿಸ್ಕತ್ತುಗಳು ಕಿಟ್ ಕ್ಯಾಟ್ ಮತ್ತು ಮಂಚ್‌ನಂತಹ ಚಾಕೊಲೇಟ್‌ಗಳಿಗಿಂತಲೂ ಹೆಚ್ಚು ಸಕ್ಕರೆಯನ್ನು ಹೊಂದಿರುತ್ತವೆ. ನಮ್ಮಲ್ಲಿ ಅನೇಕರು ಮಕ್ಕಳು ಚಾಕಲೇಟ್ ತಿನ್ನದಂತೆ ತಡೆಯುತ್ತಾರೆ, ಆದ್ರೆ ಬಿಸ್ಕೆಟ್‌ಗಳನ್ನು ಕೊಡುತ್ತಾರೆ.
ದಿನನಿತ್ಯದ ಬಿಸ್ಕತ್ ಸೇವನೆಯಿಂದ ಅಪಾಯ
ಬೌರ್ಬನ್, ಜಿಮ್ ಜಾಮ್ ಮತ್ತು ಹೈಡ್ ಅಂಡ್ ಸೀಕ್‌ನಂತಹ ಬಿಸ್ಕತ್ತುಗಳಲ್ಲಿ ಸಕ್ಕರೆ ಪ್ರಮಾಣ ವಿಪರೀತವಾಗಿರುತ್ತದೆ. ಅನೇಕ ಪೋಷಕರು ಮಕ್ಕಳ ಲಂಚ್ ಬ್ಯಾಗ್‌ನಲ್ಲೂ ಬಿಸ್ಕೆಟ್‌ಗಳನ್ನಿಡುತ್ತಾರೆ. ಬಿಸ್ಕತ್ತುಗಳು ಚಾಕೊಲೇಟ್ಗಿಂತ ಕಡಿಮೆ ಹಾನಿಕಾರಕವೆಂದು ಪೋಷಕರು ಭಾವಿಸುತ್ತಾರೆ. ಬಿಸ್ಕತ್ತುಗಳನ್ನು ಆರೋಗ್ಯಕರ ತಿಂಡಿ ಎಂದು ಪ್ರಚಾರ ಮಾಡಲಾಗುತ್ತದೆ. ಅವುಗಳನ್ನು ‘ಜೀರ್ಣಕಾರಿ’ ಅಥವಾ ‘ಮೆದುಳಿನ ವರ್ಧಕಗಳು’ ಎಂದು ಕರೆಯಲಾಗಿದ್ದರೂ, ಭಾರತದಲ್ಲಿ ಹೆಚ್ಚಿನ ಬಿಸ್ಕತ್ತುಗಳು ಮೈದಾ , ಸಕ್ಕರೆ ಮತ್ತು ತಾಳೆ ಎಣ್ಣೆಯಿಂದ ಮಾಡಲ್ಪಟ್ಟಿರುತ್ತವೆ. ಹಾಗಾಗಿ ಬಿಸ್ಕೆಟ್‌ಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.
ಪೆಪ್ಸಿ ಮತ್ತು ಕೋಕ್‌ಗಿಂತಲೂ ಹೆಚ್ಚು ಹಾನಿಕಾರಕ ಬೋರ್ನ್‌ವಿಟಾ…?
ಮಕ್ಕಳಿಗೆ ಪ್ರತಿದಿನ ಹಾಲಿಗೆ ಬೋರ್ನ್‌ವಿಟಾ ಬೆರೆಸಿ ಕೊಡುವ ಅಭ್ಯಾಸ ನಮ್ಮಲ್ಲಿ ಅನೇಕ ಪೋಷಕರಿಗೆ ಇರಬಹುದು. ಈ ಮೂಲಕ ಪ್ರತಿ ವಾರ ಮಕ್ಕಳೂ 14 ಗ್ಲಾಸ್ ಬೌರ್ನ್ವಿಟಾ ಹಾಲನ್ನು ಕುಡಿಯುತ್ತಾರೆ. ಅಪರೂಪಕ್ಕೊಮ್ಮೆ ಒಂದು ಅಥವಾ ಎರಡು ಲೋಟದಷ್ಟು ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಬೌರ್ನ್ವಿಟಾವನ್ನು ಖಾಲಿ ಹೊಟ್ಟೆಯಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ, ಇದರಿಂದಾಗಿ ದೇಹದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ. ಮತ್ತೊಂದೆಡೆ ಕೋಕ್ ಮತ್ತು ಪೆಪ್ಸಿಯಂತಹ ತಂಪು ಪಾನೀಯಗಳನ್ನು ಹೆಚ್ಚಾಗಿ ಆಹಾರದೊಂದಿಗೆ ಸೇವಿಸಲಾಗುತ್ತದೆ, ಇದು ಸಕ್ಕರೆಯ ಸ್ಪೈಕ್ ಅನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ಸಾಂದರ್ಭಿಕವಾಗಿ ತಿನ್ನುವ ಆಹಾರಕ್ಕಿಂತ ಹೆಚ್ಚಾಗಿ ದೈನಂದಿನ ಸೇವನೆಯ ಮೇಲೆ ಜನರು ಗಮನಹರಿಸಬೇಕು ಎಂಬುದು ತಜ್ಞರ ಸಲಹೆ.
ಆರೋಗ್ಯಕ್ಕೆ ಒಳ್ಳೆಯದು ಡಾರ್ಕ್ ಚಾಕೊಲೇಟ್!
ಡಾರ್ಕ್ ಚಾಕೊಲೇಟ್ ಹೃದಯದ ಆರೋಗ್ಯ ಮತ್ತು ರಕ್ತ ಪರಿಚಲನೆಗೆ ಒಳ್ಳೆಯದು. ಇದು ರಕ್ತನಾಳಗಳನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ ಮತ್ತು ಅಡಚಣೆಯನ್ನು ತಡೆಯುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಚಾಕೊಲೇಟ್ ಕೆಮ್ಮನ್ನು ಸಹ ನಿಯಂತ್ರಿಸುತ್ತದೆ. ಇದು ಥಿಯೋಬ್ರೋಮಿನ್ ಎಂಬ ಅಂಶವನ್ನು ಹೊಂದಿರುತ್ತದೆ, ಇದು ಕೆಮ್ಮಿಗೆ ಕಾರಣವಾದ ಮೆದುಳಿನ ಭಾಗವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲ ಡಾರ್ಕ್ ಚಾಕೊಲೇಟ್ ಕೂಡ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಊಟಕ್ಕೆ ಮುಂಚೆ ಸ್ವಲ್ಪ ಚಾಕೊಲೇಟ್ ತಿನ್ನುವುದರಿಂದ ದೇಹದಲ್ಲಿ ಹಾರ್ಮೋನ್ ಗಳನ್ನು ಸಕ್ರಿಯಗೊಳಿಸಿ ಹೊಟ್ಟೆ ತುಂಬಿದಂತಾಗುತ್ತದೆ. ಈ ಮೂಲಕ ಆಹಾರವನ್ನ ನಾವು ಕಡಿಮೆ ತಿನ್ನಬಹುದು. ಡಾರ್ಕ್ ಚಾಕೊಲೇಟ್ ಮೆದುಳಿನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಅಷ್ಟೇ ಅಲ್ಲ ಇದು ಮಧುಮೇಹವನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.