alex Certify ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಈ ಆಹಾರವನ್ನ ಸೇವಿಸೋಕೆ ಮರೆಯದಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಈ ಆಹಾರವನ್ನ ಸೇವಿಸೋಕೆ ಮರೆಯದಿರಿ

ಚಳಿಗಾಲ ಬಂತು ಅಂದ್ರೆ ಸಾಕು ಚರ್ಮ ಹಾಗೂ ದೈಹಿಕ ಆರೋಗ್ಯದ ಮೇಲೆ ಬಲವಾದ ಪರಿಣಾಮವನ್ನ ಬೀರುತ್ತೆ. ಈಗಂತೂ ವರ್ಕ್​ ಫ್ರಮ್​ ಹೋಂ ಇರೋದ್ರಿಂದ ದೇಹ ದಂಡನೆ ಮಾಡೋಕೆ ಅವಕಾಶವೇ ಇಲ್ಲದಂತಾಗಿದೆ. ಆದರೆ ಮನೆಯಲ್ಲೇ ಕುಳಿತು ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ತೂಕದಲ್ಲಿ ಏರಿಕೆ, ಸಂಧುಗಳಲ್ಲಿ ಸಮಸ್ಯೆ, ವಿಟಾಮಿನ್​ ಡಿ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆ ಉಂಟಾಗುತ್ತೆ ಅಂತಾರೆ ಆಹಾರ ತಜ್ಞರು.

ಇನ್ನು ಒಣ ಚರ್ಮದ ಸಮಸ್ಯೆ, ಕೂದಲು ಉದುರುವಿಕೆ ಕೂಡ ಚಳಿಗಾಲದ ದೊಡ್ಡ ಸಮಸ್ಯೆಗಳಲ್ಲೊಂದು. ಆದರೆ ಚಳಿಗಾಲದಲ್ಲಿ ಆಹಾರ ಕ್ರಮದಲ್ಲಿ ಕೆಲ ಪ್ರಮುಖ ಬದಲಾವಣೆಗಳನ್ನ ತರೋದ್ರಿಂದ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.

ಬೆಳ್ಳುಳ್ಳಿ : ನೀವೆನಾದರೂ ಬೆಳ್ಳುಳ್ಳಿ ಪ್ರಿಯರಾಗಿದ್ದರೆ ಇದನ್ನ ಸೇವಿಸೋಕೆ ಚಳಿಗಾಲ ಸರಿಯಾದ ಸಮಯವಾಗಿದೆ. ಬೆಳ್ಳುಳ್ಳಿ ಸಲೆನಿಯಂ, ಜರ್ಮೇನಿಯಂ ಹಾಗೂ ಸಲ್ಪೈಡ್ರಲ್​ ಅಮಿನೋ ಆಸಿಡ್​​​ಗಳ ಆಗರವಾಗಿದೆ. ಇದರಿಂದ ದೇಹದಲ್ಲಿ ಇಮ್ಯೂನಿಟಿ ಕೂಡ ಹೆಚ್ಚಾಗಲಿದೆ.

ಚಕ್ಕೆ : ಎಲ್ಲರ ಮನೆಯ ಅಡುಗೆ ಕೋಣೆಯಲ್ಲಿ ಈ ಪದಾರ್ಥ ಇದ್ದೇ ಇರುತ್ತೆ. ಚಕ್ಕೆಯಲ್ಲಿ ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶ ಅಗಾಧ ಪ್ರಮಾಣದಲ್ಲಿ ಇರುತ್ತೆ. ಅಲ್ಲದೇ ದೇಹದಲ್ಲಿ ಕೆಂಪು ರಕ್ತ ಕಣವನ್ನ ಹೆಚ್ಚಿಸೋಕೂ ಈ ಪದಾರ್ಥ ತುಂಬಾನೇ ಸಹಕಾರಿ. ಅಲ್ಲದೇ ದೇಹದಲ್ಲಿ ಡಯಾಬಿಟೀಸ್​ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ. ಇದನ್ನ ಬೆಳಗ್ಗೆ ನಿಮ್ಮ ಕಾಫಿ ಇಲ್ಲವೇ ಚಹದಲ್ಲಿ ಸೇರಿಸೋದ್ರಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ.

ಗೆಣಸು : ಗೆಣಸಿನಲ್ಲಿ ಫೈಬರ್, ವಿಟಾಮಿನ್​ ಎ, ಪೋಟಾಶಿಯಂ ಅಗಾಧ ಪ್ರಮಾಣದಲ್ಲಿ ಇರುತ್ತೆ. ನೀವೇನಾದರೂ ಕ್ಯಾಲೋರಿ ಕರಗಿಸಿ ಪೋಷಕಾಂಶ ಹೆಚ್ಚಿಸುವ ಪದಾರ್ಥದ ಹುಡುಕಾಟದಲ್ಲಿದ್ದರೆ ಇದಕ್ಕೆ ಸರಿಯಾದ ಉತ್ತರ ಗೆಣಸು. ಮಲಬದ್ಧತೆಯನ್ನ ಕಡಿಮೆ ಮಾಡಿ ಇಮ್ಯೂನಿಟಿ ಪ್ರಮಾಣ ಕೂಡ ಗೆಣಸಿನಿಂದ ಹೆಚ್ಚಲಿದೆ.

ಪಾಲಾಕ್​ ಸೊಪ್ಪು: ಯಾವುದಾದರೂ ಸೊಪ್ಪಿನಿಂದ ನಿಮಗೆ ಎಲ್ಲಾ ಬಗೆಯ ಪೋಷಕಾಂಶ ಸಿಗಬೇಕು ಅಂದರೆ ಪಾಲಾಕ್​ ಸೊಪ್ಪಿಗಿಂತ ಒಳ್ಳೆಯ ಆಯ್ಕೆ ಮತ್ತೊಂದಿಲ್ಲ. ಈ ಸೊಪ್ಪಿನಲ್ಲಿ ಚಳಿಗಾಲದಲ್ಲಿ ಬಹುಮುಖ್ಯವಾಗಿ ಬೇಕಾದ ಫೈಬರ್​, ವಿಟಾಮಿನ್​ ಸಿ ಹೇರಳವಾಗಿ ಸಿಗಲಿದೆ. ಅದು ಮಾತ್ರವಲ್ಲದೇ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆ ಮಾಡೋದ್ರ ಜೊತೆಗೆ ಲಿವರ್​ನ ಆರೋಗ್ಯಕ್ಕೂ ಪಾಲಕ್​ ಬಹಳವೇ ಸಹಕಾರಿ .

ಇಷ್ಟು ಮಾತ್ರವಲ್ಲದೇ ಕಿತ್ತಳೆ, ದ್ರಾಕ್ಷಿ, ನಿಂಬು, ಸೊಯಾಬಿನ್​, ಹಸಿರು ಬಟಾಣಿಗಳು ಕೂಡ ನಿಮ್ಮ ಆರೋಗ್ಯವನ್ನ ಉತ್ತಮ ಮಾಡೋದ್ರ ಜೊತೆಗೆ ಚರ್ಮದ ಕಾಂತಿಯನ್ನ ಕಾಪಾಡೋಕೂ ತುಂಬಾನೇ ಸಹಕಾರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...