alex Certify ಈ ಮಹಿಳೆಗೆ ಮುಟ್ಟಿನ ಸಮಯದಲ್ಲಿ ಕಣ್ಣಿನಲ್ಲಾಗುತ್ತಂತೆ ರಕ್ತಸ್ರಾವ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಹಿಳೆಗೆ ಮುಟ್ಟಿನ ಸಮಯದಲ್ಲಿ ಕಣ್ಣಿನಲ್ಲಾಗುತ್ತಂತೆ ರಕ್ತಸ್ರಾವ…..!

ಮಹಿಳೆಯೊಬ್ಬಳು ತನಗೆ ರಕ್ತದ ಕಣ್ಣೀರಿನ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದು ಈ ವಿಚಾರ ಕೇಳಿದ ವೈದ್ಯರು ಶಾಕ್​ ಆಗಿದ್ದಾರೆ. ಚಂಡೀಗಢದ 25 ವರ್ಷದ ಯುವತಿ ಈ ವಿಚಿತ್ರ ಸಮಸ್ಯೆ ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ.

ಕಣ್ಣಿನಲ್ಲಿ ರಕ್ತ ಬರುತ್ತಿದ್ದರೂ ಸಹ ಯುವತಿ ಯಾವುದೇ ರೀತಿಯ ನೋವನ್ನ ಅನುಭವಿಸುತ್ತಿಲ್ಲವಂತೆ. ಕಳೆದ ತಿಂಗಳು ಕೂಡ ತನಗೆ ಈ ರೀತಿ ಸಮಸ್ಯೆ ಉಂಟಾಗಿತ್ತು ಎಂದು ಯುವತಿ ವೈದ್ಯರ ಬಳಿ ಹೇಳಿಕೊಂಡಿದ್ದಾಳೆ.

ಇದಾದ ಬಳಿಕ ಯುವತಿ ವಿವಿಧ ಮಾದರಿಯ ಕಣ್ಣಿನ ಪರೀಕ್ಷೆಗೆ ಒಳಗಾಗಿದ್ದಾಳೆ. ಆದರೆ ಯಾವುದರಲ್ಲೂ ಆಕೆಯ ಸಮಸ್ಯೆ ಬಗ್ಗೆ ರಿಪೋರ್ಟ್ ಹೇಳಿಲ್ಲ.

ಇದಾದ ಬಳಿಕ ವೈದ್ಯರು ಈ ಕೇಸ್​ನ್ನು ಕೂಲಕುಂಶವಾಗಿ ಪರಿಶೀಲಿಸಿದ್ದಾರೆ. ಎರಡು ಬಾರಿಯೂ ಈ ಯುವತಿ ಮುಟ್ಟಿನ ಸಮಯದಲ್ಲಿ ರಕ್ತ ಕಣ್ಣೀರು ಹರಿಸಿದ್ದಾಳೆ. ಮುಟ್ಟಿನ ಸಮಯದಲ್ಲಿ ದೇಹದ ಇತರೆ ಭಾಗದ ಮೂಲಕ ರಕ್ತ ವಿಸರ್ಜನೆಯಾಗೋದು ಇದೊಂದು ವಿಚಿತ್ರ ಸಮಸ್ಯೆಯಾಗಿದೆ. ಕೆಲವರಿಗೆ ಈ ಸಮಯದಲ್ಲಿ  ತುಟಿ, ಶ್ವಾಸಕೋಶ ಹಾಗೂ ಹೊಟ್ಟೆಯಿಂದಲೂ ರಕ್ತಸ್ರಾವ ಆಗಬಹುದು ಎಂದು ವೈದ್ಯರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...