ಜಗತ್ತಿನಾದ್ಯಂತ ಎಲ್ಲ ದೇಶಗಳ ಪಾಸ್‌ಪೋರ್ಟ್‌ಗಳನ್ನೂ ಈ ನಾಲ್ಕರ ಪೈಕಿ ಒಂದು ಬಣ್ಣದಲ್ಲಿ ಮಾಡಲಾಗಿರುತ್ತದೆ – ಕಪ್ಪು, ನೀಲಿ, ಕೆಂಪು ಹಾಗೂ ಹಸಿರು. ಅಚ್ಚರಿಯೆಂದರೆ, ಪಾಸ್‌ಪೋರ್ಟ್‌ಗಳ ಬಣ್ಣದ ಕುರಿತು ಯಾವ ನಿಯಮವೂ ಇಲ್ಲ.
ತಮಗೆ ಬೇಕಾದ ಬಣ್ಣವನ್ನು ದೇಶಗಳು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮೇಲ್ಕಂಡ ಬಣ್ಣಗಳು ಸಾಮಾನ್ಯವಾಗಿ ನಿಯಾನ್ ಅಥವಾ ಪಿಂಕ್‌ಗಿಂತಲೂ ಧೂಳು ಹಾಗೂ ಸವೆಯುವ ಗುರುತುಗಳನ್ನು ಮರೆಮಾಚುತ್ತವೆ ಎಂಬ ಕಾರಣಕ್ಕೆ ಹೆಚ್ಚು ಆದ್ಯತೆ ಪಡೆದಿವೆ.
ಭಾರತದ ಪಾಸ್‌ಪೋರ್ಟ್ ನೀಲಿ ಬಣ್ಣದ್ದಾಗಿದ್ದರೆ, ಕೆಂಪು ಬಣ್ಣದ ಶೇಡ್ ಒಂದನ್ನು ಐರೋಪ್ಯ ಒಕ್ಕೂಟದ ದೇಶಗಳು ಆಯ್ಕೆ ಮಾಡಿಕೊಂಡಿವೆ. ಇಸ್ಲಾಮಿಕ್ ದೇಶಗಳು ಹಸಿರು ಬಣ್ಣದ ಪಾಸ್‌ಪೋರ್ಟ್ ಹೊಂದಿವೆ.