ಪ್ರೀತಿಗೆ ವಯಸ್ಸು, ಬಣ್ಣ, ಜಾತಿ ಯಾವುದರ ಹಂಗೂ ಇಲ್ಲ ಅನ್ನೋ ಮಾತಿದೆ. ಆದ್ರೆ ಪುರುಷರು ಮಾತ್ರ ತಮ್ಮ ಸಂಗಾತಿಯಾಗಿ ತಮಗಿಂತ ಕಡಿಮೆ ವಯಸ್ಸಿನವರನ್ನೇ ಆಯ್ಕೆ ಮಾಡಿಕೊಳ್ತಾರೆ. ಇದಕ್ಕೆ ಕಾರಣ ಏನು ಅನ್ನೋದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ಸಂಬಂಧಗಳ ಮಧ್ಯೆ ವಯಸ್ಸಿನ ಅಂತರ ಎಷ್ಟಿರಬೇಕು? ಪುರುಷರ ಡೇಟಿಂಗ್ ಹ್ಯಾಬಿಟ್ಸ್ ಏನು ಅನ್ನೋದನ್ನು ತಿಳಿದುಕೊಳ್ಳಲು ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆ ಪ್ರಕಾರ ಮಹಿಳೆಯರು ತಮ್ಮದೇ ವಯಸ್ಸಿನ ಪುರುಷರನ್ನು ಇಷ್ಟಪಡ್ತಾರೆ.
ಒಂದೆರಡು ವರ್ಷ ಹೆಚ್ಚು ಕಡಿಮೆ ಇದ್ರೆ ಚೆನ್ನ ಎನ್ನುತ್ತಾರೆ. ಆದ್ರೆ ಪುರುಷರು ಮಾತ್ರ ತಮಗಿಂತಲೂ ಕಿರಿಯ ವಯಸ್ಸಿನ ಮಹಿಳೆಯೇ ಸಂಗಾತಿಯಾಗಬೇಕೆಂದು ಬಯಸುತ್ತಾರೆ. ತನಗೆಷ್ಟೇ ವಯಸ್ಸಾಗಿದ್ರೂ, 20 ವರ್ಷದ ಯುವತಿ ಜೊತೆಗೆ ಡೇಟಿಂಗ್ ಹೋಗಲು ಇಷ್ಟಪಡ್ತಾರೆ.
ಇನ್ನೂ ಒಂದು ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ 50 ವರ್ಷಕ್ಕಿಂತ ಹಿರಿಯರು, ಚಿಕ್ಕ ವಯಸ್ಸಿನ ಮಹಿಳೆಯ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ರೆ ಅವರ ಆಯಸ್ಸು ಜಾಸ್ತಿಯಾಗುತ್ತದೆ. ಇದಕ್ಕೆ ಕಾರಣ ತಮ್ಮ ಬದುಕನ್ನು ಅವರು ಹೆಚ್ಚಾಗಿ ಪ್ರೀತಿಸುವುದು.
ಆದ್ರೆ ತಮ್ಮದೇ ವಯಸ್ಸಿನ ಯುವತಿಯನ್ನು ಪ್ರೀತಿ ಮಾಡುವ ಪುರುಷರಿಗೆ ಆಯಸ್ಸು ಕಡಿಮೆ. ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಆದ್ರೆ 30 ವರ್ಷದ ನಂತರ, 10 ವರ್ಷದ ಅಂತರವಿರುವವರನ್ನು ಮದುವೆಯಾದ್ರೆ ಭಿನ್ನಾಭಿಪ್ರಾಯಗಳು ಮೂಡಬಹುದು. ದಂಪತಿ ಮಧ್ಯೆ ವಿರಸ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.