ಮಹಿಳೆ ಹಾಗೂ ಪುರುಷ ಇಬ್ಬರೂ ಶರ್ಟ್ ಧರಿಸ್ತಾರೆ. ಆದ್ರೆ ಈ ಶರ್ಟ್ ಬಟನ್ ಮಾತ್ರ ಬೇರೆ ಬೇರೆಯಾಗಿರುತ್ತವೆ. ಪುರುಷರ ಶರ್ಟ್ ಬಟನ್ ಬಲಕ್ಕಿದ್ದರೆ, ಮಹಿಳೆಯದ ಶರ್ಟ್ ಬಟನ್ ಗಳು ಎಡಕ್ಕಿರುತ್ತವೆ. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ?
ಒಂದು ವಾದದ ಪ್ರಕಾರ ಹಿಂದಿನ ದಿನಗಳಲ್ಲಿ ಪುರುಷರು ತಮ್ಮ ಬಟ್ಟೆಯನ್ನು ತಾವೇ ಧರಿಸುತ್ತಿದ್ದರಂತೆ. ಆದ್ರೆ ಮಹಿಳೆಯರಿಗೆ ಈ ಸ್ವಾತಂತ್ರ್ಯವಿರಲಿಲ್ಲ. ಬೇರೆಯವರು ಅವರಿಗೆ ಬಟ್ಟೆ ತೊಡಿಸುತ್ತಿದ್ದರು. ಆ ವೇಳೆ ಹೆಚ್ಚಿನ ಜನರು ಬಲಗೈಯನ್ನು ಬಳಸುತ್ತಿದ್ದರು. ಆದ್ದರಿಂದ ಮುಂದೆ ನಿಂತು ಅವರಿಗೆ ಬಟನ್ ಹಾಕಲು ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಮಹಿಳೆಯರ ಬಟನ್ನನ್ನು ಎಡಕ್ಕೆ ಇಡಲಾಗಿದೆಯಂತೆ.
ಇನ್ನೊಂದು ವಾದದ ಪ್ರಕಾರ ಹಿಂದಿನ ದಿನಗಳಲ್ಲಿ ಪುರುಷರು ಬಲಗೈನಲ್ಲಿ ಕತ್ತಿಯನ್ನು ಹಿಡಿಯುತ್ತಿದ್ದರಂತೆ. ಬಟನ್ ತೆಗೆಯಲು ಅವರು ಎಡಗೈ ಬಳಸುತ್ತಿದ್ದರಂತೆ. ಹಾಗಾಗಿ ಅವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಬಲ ಭಾಗಕ್ಕೆ ಬಟನ್ ಇಡಲಾಗುತ್ತಿತ್ತು.
ಇತಿಹಾಸದ ಪ್ರಕಾರ, ನೆಪೋಲಿಯನ್ ಬೊನಾಪಾರ್ಟೆ ಬಟನ್ ನಿಯಮ ಬದಲಾಯಿಸಿದ್ದಾನೆ ಎನ್ನಲಾಗುತ್ತದೆ. ನೆಪೋಲಿಯನ್ ಬೊನಾಪಾರ್ಟೆ ಒಂದು ಕೈಯನ್ನು ಸದಾ ತನ್ನ ಡ್ರೆಸ್ ಮೇಲಿಡುತ್ತಿದ್ದನಂತೆ. ಇದನ್ನು ಮಹಿಳೆಯರು ಕಾಪಿ ಮಾಡಲು ಶುರುಮಾಡಿದರಂತೆ. ಇದರಿಂದ ಕೋಪಗೊಂಡ ನೆಪೋಲಿಯನ್ ಬೊನಾಪಾರ್ಟೆ, ಮಹಿಳೆಯದ ಶರ್ಟ್ ಬಟನ್ ಎಡಭಾಗಕ್ಕಿರಬೇಕೆಂದು ಆದೇಶ ಹೊರಡಿಸಿದನಂತೆ.