ಕ್ಷೌರದ ಸಮಯದಲ್ಲಿ ಅಥವಾ ಬೇರೆ ಯಾವುದೋ ಕೆಲಸಕ್ಕೆ ಬ್ಲೇಡ್ ಬಳಕೆ ಮಾಡ್ತೇವೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಬ್ಲೇಡ್ ಕಂಪನಿಗಳಿವೆ. ಆದ್ರೆ ಎಲ್ಲ ಕಂಪನಿ ಬ್ಲೇಡ್ ನ ಒಳ ವಿನ್ಯಾಸ ಒಂದೇ ರೀತಿಯಿರುತ್ತದೆ. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ?
1901ರಲ್ಲಿ ಜಿಲೆಟ್ ಕಂಪನಿ ಸಂಸ್ಥಾಪಕ ಕಿಂಗ್ ಕ್ಯಾಂಪ್ ಜಿಲೆಟ್ ತಮ್ಮ ಸಹೋದ್ಯೋಗಿ ವಿಲಿಯಂ ನಿಕರ್ಸನ್ ಜೊತೆ ಸೇರಿ ಬ್ಲೇಡ್ ವಿನ್ಯಾಸಗೊಳಿಸಿದ್ರು. ಇದೇ ವರ್ಷ ವಿನ್ಯಾಸಕ್ಕೆ ಪೇಟೆಂಟ್ ಪಡೆದ್ರು. 1904ರಲ್ಲಿ ಬ್ಲೇಡ್ ಉತ್ಪಾದನೆ ಶುರು ಮಾಡಿದ್ರು. ಆರಂಭದಲ್ಲಿ ಜಿಲೆಟ್ ಮಾತ್ರ ಬ್ಲೇಡ್ ಹಾಗೂ ರೇಜರ್ ತಯಾರಿಸುತ್ತಿತ್ತು. ರೇಜರ್ ಒಳಗೆ ಬ್ಲೇಡ್ ಕುಳಿತುಕೊಳ್ಳಲು ನೆರವಾಗುವಂತೆ ಬ್ಲೇಡ್ ವಿನ್ಯಾಸಗೊಳಿಸಲಾಗಿತ್ತು.
ನಂತ್ರದ ದಿನಗಳಲ್ಲಿ ಇನ್ನೂ ಅನೇಕ ಕಂಪನಿಗಳು ಬ್ಲೇಡ್ ತಯಾರಿಕೆ ಶುರು ಮಾಡಿದ್ವು. ಆದ್ರೆ ಮಾರುಕಟ್ಟೆಯಲ್ಲಿದ್ದುದ್ದು ಜಿಲೆಟ್ ಕಂಪನಿ ರೇಜರ್ ಮಾತ್ರ. ಅದಕ್ಕೆ ಹೊಂದಿಕೆಯಾಗುವಂತ ಬ್ಲೇಡ್ ತಯಾರಿಸುವುದು ಅನಿವಾರ್ಯವಾಯ್ತು. ಹಾಗಾಗಿ ಜಿಲೆಟ್ ಬ್ಲೇಡ್ ಮಾದರಿಯಲ್ಲಿಯೇ ಉಳಿದ ಕಂಪನಿಗಳು ಬ್ಲೇಡ್ ತಯಾರಿಸಲು ಮುಂದಾದ್ವು.