ವಾಚ್ ಕುರಿತ ವಿಶೇಷ ಮಾಹಿತಿಯೊಂದು ಇಲ್ಲಿದೆ ನೋಡಿ. ನೀವೇನಾದರೂ ವಾಚ್ ಖರೀದಿಗೆ ಹೋದ ಸಂದರ್ಭದಲ್ಲಿ ಅಂಗಡಿಯಲ್ಲಿರುವ ವಾಚ್, ಗಡಿಯಾರಗಳನ್ನು ಗಮನಿಸಿದ್ದಿರಾ? ಜಾಹೀರಾತು ವಾಚ್, ಗಡಿಯಾರಗಳಲ್ಲಿ ಸಮಯ ಯಾವಾಗಲೂ 10 ಗಂಟೆ 10 ನಿಮಿಷ ತೋರಿಸುತ್ತದೆ ಎಂಬುದನ್ನು ನೋಡಿದ್ದೀರಾ? ಇದರ ಹಿಂದಿದೆ ಒಂದು ಸ್ವಾರಸ್ಯದ ವಿಷಯ.
ವಾಚ್ ಖರೀದಿಸಲು ಹೋದಾಗ, ಸಾಮಾನ್ಯವಾಗಿ ಬೆಲೆ, ಬ್ರಾಂಡ್ ಕಡೆಗೆ ಹೆಚ್ಚು ಗಮನ ಕೊಡುತ್ತೇವೆ. ಅದರಲ್ಲಿಯೂ ಒಂದು ಇಂಟ್ರೆಸ್ಟಿಂಗ್ ಸಂಗತಿ ಇದೆ. ಜಾಹೀರಾತುಗಳಲ್ಲಿನ ಎಲ್ಲಾ ವಾಚ್ ಸಾಮಾನ್ಯವಾಗಿ 10 ಗಂಟೆ, 10 ನಿಮಿಷ ಸಮಯವನ್ನು ತೋರಿಸುತ್ತವೆ.
ವಾಚ್ ಗಳ ಬ್ರಾಂಡ್ ಮತ್ತು ಲೋಗೋ ಮೇಲ್ಭಾಗದಲ್ಲಿರುವ ಕಾರಣ, ಗಂಟೆ, ಸಮಯದ ಮುಳ್ಳನ್ನು 12 ರ ಬಳಿಗೆ ಇಟ್ಟರೆ ಕಾಣುವುದಿಲ್ಲ ಎಂಬ ಕಾರಣದಿಂದ ಗಂಟೆ ಮುಳ್ಳನ್ನು 10 ರ ಬಳಿ, ನಿಮಿಷದ ಮುಳ್ಳನ್ನು 2 ರ ಬಳಿ ಇರುವಂತೆ ಮಾಡಲಾಗುತ್ತದೆ.
ಮೊದಲಿಗೆ 8.20 ಸಮಯ ಇರುವಂತೆ ಟೈಮ್ ಹೊಂದಿಸಲಾಗುತ್ತಿತ್ತು. ಇದು ಅಳುತ್ತಿರುವಂತೆ ಕಾಣುತ್ತದೆ. ಹಾಗಾಗಿ ಸ್ಮೈಲಿಂಗ್ ಫೇಸ್ ಇರಲಿ, ಜೊತೆಗೆ ಲೋಗೋ ಮತ್ತು ಬ್ರಾಂಡ್ ಕೂಡ ರಾರಾಜಿಸಲಿ ಎಂಬ ಕಾರಣದಿಂದ ಹೀಗೆ ಜಾಹೀರಾತು ವಾಚ್ ಗಳಲ್ಲಿ ಹೆಚ್ಚಾಗಿ ಸಮಯ 10-10 ಇರುವಂತೆ ಜೋಡಿಸಲಾಗುತ್ತದೆ ಎಂದು ಹೇಳಲಾಗಿದೆ.