ನಮ್ಮ ಮನೆಯಲ್ಲಿರುವ ಅನೇಕ ವಸ್ತುಗಳನ್ನು ನಾವು ಆಗಾಗ ಬದಲಿಸುತ್ತಲೇ ಇರಬೇಕು. ಆದರೆ ಕೆಲವೊಂದು ವಿಚಾರಗಳನ್ನು ನಾವು ಹಾಗೆ ಬದಲಿಸಲು ಇಷ್ಟ ಪಡುವುದಿಲ್ಲ.
ಉದಾಹರಣೆಗೆ, ಕೆಲವರಿಗೆ ಟಿವಿ, ಟೇಬಲ್ ಫ್ಯಾನ್, ಫೋಟೋ ಫ್ರೇಮ್, ಅಥವಾ ಲಿವಿಂಗ್ ರೂಂಗಳಲ್ಲಿರುವ ವಸ್ತುಗಳನ್ನು ಅಲ್ಲಲ್ಲೇ ಇಡಲು ಇಷ್ಟವಾಗುತ್ತದೆ. ಆದರೆ ಬೆಡ್‌ಶೀಟ್‌ಗಳು, ಕವರ್‌ಗಳು ಹಾಗೂ ದಿಂಬುಗಳನ್ನು ಆಗಾಗ ಬದಲಿಸುತ್ತಲೇ ಇರಬೇಕು.
ಪಿಂಚಣಿ ಪಡೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ, ಪೆನ್ಷನ್ ಪಡೆಯಲು ಅಗತ್ಯವಾಗಿ ಬೇಕಿದೆ ಈ ವಿಶಿಷ್ಟ ಸಂಖ್ಯೆ
ಆದರೆ ನಿಜಕ್ಕೂ ನಾವೆಷ್ಟು ಬಾರಿ ದಿಂಬನ್ನು ಬದಲಿಸುತ್ತೇವೆ? ಡಾ. ಕರಣ್ ರಾಜ್ ಟಿಕ್‌ಟಾಕ್‌ನಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ, ಎರಡು ವರ್ಷಗಳಿಗೊಮ್ಮೆ ನೀವು ನಿಮ್ಮ ದಿಂಬನ್ನು ಏಕೆ ಬದಲಿಸಬೇಕೆಂದು ತಿಳಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಕೆಲಸ ಮಾಡುವ ವೈದ್ಯರಾದ ಡಾ. ಕರಣ್ ರಾಜ್ ಟಿಕ್‌ಟಾಕ್‌ನಲ್ಲಿ, ಕೋವಿಡ್-19 ಸೇರಿದಂತೆ ಇಂಥದ್ದೇ ಅನೇಕ ವಿಚಾರಗಳ ಬಗ್ಗೆ ವಿಡಿಯೋಗಳನ್ನು ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಸ್ವೀಕೃತಿ ಸಿಕ್ಕಿದೆ.
https://www.instagram.com/p/CL9a47nhSg0/?utm_source=ig_web_copy_link