ಕೊರೊನಾ ವೈರಸ್ನಿಂದಾಗಿ ಈಗ ವರ್ಕ್ ಫ್ರಂ ಹೋಂ ಅನ್ನೋದು ಕಾಮನ್ ಆಗಿಬಿಟ್ಟಿದೆ. ಮನೆಯ ಒಂದು ಕೋಣೆಯನ್ನೇ ಆಫೀಸು ಮಾಡಿಕೊಂಡಿರುವ ಅನೇಕರು ಕಳೆದೊಂದು ವರ್ಷದಿಂದ ಅಲ್ಲೇ ಕೆಲಸವನ್ನ ಮಾಡ್ತಿದ್ದಾರೆ. ಆದರೆ ಈ ರೀತಿ ಮನೆಯನ್ನೇ ಆಫೀಸು ಮಾಡಿಕೊಳ್ಳುವ ಮುನ್ನ ನೀವು ಕೆಲವೊಂದು ವಾಸ್ತು ಟಿಪ್ಸ್ ಅನುಸರಿಸಿದ್ರೆ ಕೆಲಸದಲ್ಲಿ ಕಿರಿಕಿರಿ ಇಲ್ಲದೇ ನೆಮ್ಮದಿ ನೆಲೆಸಲಿದೆ.
ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ಇಲ್ಲವೇ ನೈಋತ್ಯ ಮೂಲೆಯಲ್ಲಿ ನೀವು ಕಚೇರಿ ಕೆಲಸವನ್ನ ಮಾಡಿ. ಇದರಿಂದ ನಿಮ್ಮ ಕೆಲಸದಲ್ಲಿ ಇಲ್ಲವೇ ಉದ್ಯಮದಲ್ಲಿ ಪ್ರಗತಿ ಕಾಣಲಿದೆ.
ಹೋಂ ಆಫೀಸ್ ಇರುವ ಕೋಣೆ ಕ್ರೀಂ, ತಿಳಿ ಹಳದಿ, ತಿಳಿ ಹಸಿರು ಅಥವಾ ತಿಳಿ ಬಂಗಾರ ಬಣ್ಣದ ಪೇಂಟಿಂಗ್ನ್ನು ಹೊಂದಿದ್ದರೆ ಒಳ್ಳೆಯದು. ಕ್ರೀಂ ಕಲರ್ನಿಂದ ನೀವು ಮಾಡುತ್ತಿರುವ ಕೆಲಸದ ಮೇಲೆ ನಿಮಗೆ ಆಸಕ್ತಿ ಹೊಂದಲು ಸಹಾಯವಾಗಲಿದೆ. ತಿಳಿ ಹಳದಿ ಬಣ್ಣ ಉತ್ತಮ ಆರೋಗ್ಯ, ತಿಳಿ ಹಸಿರು ಸಮಚಿತ್ತ, ತಿಳಿ ಬಂಗಾರ ಬಣ್ಣದಿಂದ ಲಾಭ ನಿಮ್ಮದಾಗಲಿದೆ.
ಪತ್ನಿ ಜೊತೆ ಪದೇ ಪದೇ ಜಗಳವಾಗ್ತಿದ್ದರೆ ʼಆರ್ಥಿಕʼ ಮುಗ್ಗಟ್ಟು ನಿಶ್ಚಿತ
ವಾಸ್ತು ಶಾಸ್ತ್ರದ ಪ್ರಕಾರ ನೀವು ಕುಳಿತುಕೊಳ್ಳುವ ಕುರ್ಚಿ ಆರಾಮದಾಯಕವಾಗಿರಬೇಕು. ಈ ಕುರ್ಚಿಯು ನಿಮ್ಮ ತಲೆಗೂ ಆಧಾರ ಕೊಡುವಂತೆ ಇದ್ದರೆ ಇದು ನಿಮಗೆ ಬೆಂಬಲ ಸಿಕ್ಕ ಸಂದೇಶವಾಗಿರಲಿದೆ.
ನಿಮ್ಮ ಮನೆ ಕಚೇರಿಗೆ ಆದಷ್ಟು ಕಪ್ಪು ಇಲ್ಲವೇ ಗಾಢ ನೀಲಿ ಬಣ್ಣದ ಪೇಂಟಿಂಗ್ ಬಳಕೆ ಮಾಡಬೇಡಿ. ಇದರಿಂದ ಆರೋಗ್ಯ ಸಮಸ್ಯೆ ಕಾಣಿಸೋದ್ರ ಜೊತೆಗೆ ಕಿರಿಕಿರಿ ಕೂಡ ಭಾದಿಸಲಿದೆ.