ಮನೆಯ ಅಂದವನ್ನ ಹೆಚ್ಚಿಸಬೇಕು ಅಂತಾ ತರಹೇವಾರಿ ಪೀಠೋಪಕರಣಗಳನ್ನ ಖರೀದಿ ಮಾಡುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಫರ್ನಿಚರ್ಗಳನ್ನ ಖರೀದಿ ಮಾಡುವ ಮುನ್ನ ಅದನ್ನ ಯಾವ ದಿಕ್ಕಿನಲ್ಲಿ ಇಡಬೇಕು ಅನ್ನೋದನ್ನ ನಿರ್ಧರಿಸಿ. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಸಿಗಲಿದೆ.
ಮನೆಯ ಲಿವಿಂಗ್ ಹಾಗೂ ಡ್ರಾವಿಂಗ್ ಕೋಣೆಯಲ್ಲಿ ಅತಿಯಾದ ಫರ್ನಿಚರ್ ಇಡೋದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಬಂಧನವಾಗಲಿದೆ. ಇದರಿಂದ ನಕಾರಾತ್ಮಕ ಶಕ್ತಿ ಅತಿಯಾಗಲಿದೆ. ಇದರಿಂದ ಮನೆಯಲ್ಲಿ ಕಿರಿಕಿರಿ ಹೆಚ್ಚಾಗಲಿದೆ.
ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕಿಗೆ ತುಂಬಾನೇ ಮಹತ್ವವಿದೆ. ಫರ್ನಿಚರ್ ಖರೀದಿ ಮಾಡುವ ಮುನ್ನ ಯಾವ ದಿಕ್ಕಿನಲ್ಲಿ ಫರ್ನಿಚರ್ ಇಡಬೇಕು ಅನ್ನೋದನ್ನ ಮೊದಲು ನಿರ್ಧಾರ ಮಾಡಿ. ಬೀಟೆ, ಸಾಗವನಿಯಿಂದ ಮಾಡಿದ ಪೀಠೋಪಕರಣಗಳನ್ನೇ ಕೊಂಡುಕೊಳ್ಳಿ. ಆಲ ಹಾಗೂ ಅಶ್ವತ್ಥ ಮರದಿಂದ ಮಾಡಿದ ಪಿಠೋಪಕರಣಗಳನ್ನ ಎಂದಿಗೂ ಖರೀದಿಸಬೇಡಿ.
ಮಲಗುವ ಕೋಣೆಯಲ್ಲಿ ಫೋಟೋಗಳನ್ನ ಇಡುವ ಪ್ಲಾನ್ ನಿಮ್ಮದಾಗಿದ್ದರೆ ಆದಷ್ಟು ಸೌಮ್ಯ ರೀತಿಯ ಫೋಟೋಗಳನ್ನೇ ಹಾಕಿ. ಸಿಂಹ, ಹದ್ದಿನಂತಹ ಕ್ರೂರತೆಯ ಸಂದೇಶ ಸಾರುವ ಫೋಟೋಗಳನ್ನ ಮಲಗುವ ಕೋಣೆಯಲ್ಲಿ ಇರಿಸಬೇಡಿ. ಇದರಿಂದ ನೆಮ್ಮದಿ ಕೆಡಲಿದೆ.