ಆನ್ಲೈನ್ ಡೇಟಿಂಗ್ ಹುಡುಕುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಗೂಗಲ್ ಸರ್ಚ್ ನಿಂದ ಇದು ಗೊತ್ತಾಗಿದೆ.
ಮಾಹಿತಿ ಪ್ರಕಾರ, ಆನ್ಲೈನ್ ಡೇಟ್ ಹುಡುಕಾಟದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಆದ್ರೆ ಡೇಟಿಂಗ್ ಉತ್ಸಾಹದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ಮುಂದಿನ ದಿನಗಳಲ್ಲಿ ಕಷ್ಟಕ್ಕೆ ಸಿಲುಕಿಸುತ್ತದೆ. ನೀವೂ ಕೂಡ ಆನ್ಲೈನ್ ಡೇಟಿಂಗ್ ಸೈಟ್ ಬಳಸುತ್ತೀರಾದ್ರೆ ಕೆಲವೊಂದು ಅಂಶಗಳನ್ನು ಅವಶ್ಯವಾಗಿ ತಿಳಿದಿರಿ.
ಆನ್ಲೈಟ್ ಡೇಟಿಂಗ್ ವೇಳೆ ಸ್ನಾನಗೃಹದಲ್ಲಿರುವ ಸೆಲ್ಫಿ ತೆಗೆದು ಕಳುಹಿಸಬೇಡಿ. ನಿಮ್ಮ ಶರೀರ ಪೂರ್ತಿ ಕಾಣುವ ಫೋಟೋ ಬೇಡವೇ ಬೇಡ.
ಆನ್ಲೈನ್ ಡೇಟಿಂಗ್ ವೇಳೆ ನಿಮ್ಮ ಪಾದರಕ್ಷೆ ಸಂಖ್ಯೆ, ಲೆನ್ಸ್ ಸಂಖ್ಯೆ, ಎಷ್ಟು ಎತ್ತರ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಇದು ನೀವು ಸುಂದರವಾಗಿದ್ದೀರಿ ಎನ್ನುವುದಕ್ಕಿಂತ ಬೋರಿಂಗ್ ಎಂಬುದನ್ನು ಅರ್ಥ ಮಾಡಿಸುತ್ತದೆ.
ಸಾಮಾನ್ಯವಾಗಿ ಇಂಥ ಸೈಟ್ ನಲ್ಲಿ ಹುಡುಗಿಯರು ಗ್ರೂಪ್ ಪೋಟೋ ಹಾಕ್ತಾರೆ. ಬೇರೆಯವರಿಗೆ ನಾನು ಯಾರು ಎಂಬುದು ಗೊತ್ತಾಗದಿರಲಿ ಎಂಬುದು ಹುಡುಗಿಯರ ಉದ್ದೇಶ. ಆದ್ರೆ ನೋಡುಗರು ಬೇರೆ ರೀತಿ ಅರ್ಥ ಮಾಡಿಕೊಳ್ಳುತ್ತಾರೆ. ನೀವು ಸುಂದರವಾಗಿಲ್ಲ. ಹಾಗಾಗಿ ಗ್ರೂಪ್ ಫೋಟೋ ಹಾಕಿದ್ದೀರಿ ಎಂದುಕೊಳ್ಳುತ್ತಾರೆ.
ಪ್ರತಿ ಬಾರಿ ನೋ ಎಂಬ ಪದ ಬಳಕೆ ಬೇಡ. ಶಬ್ಧದ ಮೂಲಕ ಪ್ರಶ್ನೆಗಳಿಗೆ ಉತ್ತರ ನೀಡಿ. ಪ್ರೀತಿಯನ್ನು ವ್ಯಕ್ತಪಡಿಸಲು ಶಬ್ಧ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ನಿಮ್ಮ ಡಿಪಿಗೆ ನಾಯಿ ಪೋಟೋವನ್ನು ಹಾಕಬೇಡಿ. ಇದ್ರಿಂದ ನೀವು ಬೈಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.