ಕೊರೊನಾ ವೈರಸ್ ಎರಡನೇ ಅಲೆ ಭಾರತದಲ್ಲಿ ಆತಂಕ ಹುಟ್ಟಿಸಿದೆ. ಕೊರೊನಾದ ಹೊಸ ಲಕ್ಷಣಗಳು ಕಾಣಿಸಿಕೊಳ್ತಿದ್ದು, ಸೋಂಕಿತರ ಸಂಖ್ಯೆ ಜೊತೆ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ.
ಜನರು ಕೊರೊನಾದಿಂದ ರಕ್ಷಣೆ ಪಡೆಯಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.
ಕೊರೊನಾದಿಂದ ರಕ್ಷಣೆ ಪಡೆಯುವುದು ಹೇಗೆ ಎಂಬ ಬಗ್ಗೆ ಆಯುರ್ವೇದ ತಜ್ಞ ಶ್ರೀ ನಿಲೇಶ್ ಜೋಗಲ್ ಸಲಹೆ ನೀಡಿದ್ದಾರೆ. ಕೊರೊನಾ ಆರಂಭದಲ್ಲಿಯೂ ಸಾಮಾಜಿಕ ಜಾಲತಾಣದಲ್ಲಿ ಅವರು ಕೊರೊನಾದಿಂದ ರಕ್ಷಣೆ ಪಡೆಯವುದು ಹೇಗೆ ಎಂಬ ಬಗ್ಗೆ ಸಲಹೆ ನೀಡಿದ್ದರು. ನಿಲೇಶ್ ಆಸ್ಪತ್ರೆಯಲ್ಲಿ ಈವರೆಗೆ ಸಾವಿರಾರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆದ್ರೆ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣವೇನು ಎಂಬುದನ್ನು ನಿಲೇಶ್ ಹೇಳಿದ್ದಾರೆ.
ನಿಲೇಶ್ ಪ್ರಕಾರ, ದಿನಕ್ಕೆ ಎರಡು ಬಾರಿ ಬಿಸಿ ನೀರಿನ ಉಗಿ ತೆಗೆದುಕೊಳ್ಳಬೇಕು. ಬಿಸಿ ನೀರಿಗೆ ಬೇರೆ ಯಾವ ವಸ್ತುವನ್ನೂ ಹಾಕಿಕೊಳ್ಳುವ ಅವಶ್ಯಕತೆಯಿಲ್ಲ. ಬೇಕಿದ್ದಲ್ಲೆ ಅಜ್ವೈನ್ ಹಾಕಿಕೊಳ್ಳಬಹುದು ಎಂದವರು ಸಲಹೆ ನೀಡಿದ್ದಾರೆ. ಬಿಸಿ ನೀರಿನಲ್ಲಿ ಉಗಿ ತೆಗೆದುಕೊಳ್ಳುವಾಗ ಮೂಗಿನಿಂದ ಉಸಿರು ಎಳೆದುಕೊಂಡು ಬಾಯಿಯಿಂದ ಬಿಡಬೇಕು. ಹೀಗೆ 10 ಬಾರಿ ಮಾಡಬೇಕು. ಹಾಗೆ ಬಾಯಿಯಿಂದ ಉಸಿರು ಎಳೆದುಕೊಂಡು ಮೂಗಿನಿಂದ ಬಿಡಬೇಕು. ದಿನಕ್ಕೆ ಎರಡು ಸಲ ಹೀಗೆ ಮಾಡುತ್ತಿದ್ದರೆ ಕೊರೊನಾ ಹತ್ತಿರವೂ ಸುಳಿಯುವುದಿಲ್ಲ. ಭಾರತದಲ್ಲಿ ಒಬ್ಬರೂ ಕೊರೊನಾಗೆ ತುತ್ತಾಗುವುದಿಲ್ಲವೆಂದು ನಿಲೇಶ್ ಹೇಳಿದ್ದಾರೆ.