ಪ್ರೀತಿಸುವ ವ್ಯಕ್ತಿ ಜೀವನ ಸಂಗಾತಿಯಾಗಿ ಸಿಕ್ರೆ ಅದ್ರ ಖುಷಿಯೇ ಬೇರೆ. ಆದ್ರೆ ಈ ಅದೃಷ್ಟ ಎಲ್ಲರಿಗೂ ಸಿಗೋದಿಲ್ಲ. ಬ್ಯಾಡ್ ಬಾಯ್/ಗರ್ಲ್ ಎಂದು ಹಣೆಪಟ್ಟಿ ಹೊತ್ತುಕೊಂಡವರಿಗೆ ಪ್ರೀತಿಯಲ್ಲಿ ಮೋಸವಾಗೋದು ಅಪರೂಪ. ಒಳ್ಳೆ ಹುಡುಗ/ಹುಡುಗಿ ಎಂದು ಹೆಸರು ಮಾಡಿದವರೇ ಪ್ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫೇಲ್ ಆಗ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ.
ಹೆಚ್ಚು ಪ್ರಾಮಾಣಿಕತೆ ಪ್ರೀತಿಯ ಮೋಸಕ್ಕೆ ಮೊದಲ ಕಾರಣ. ಒಳ್ಳೆ ಹುಡುಗ/ಹುಡುಗಿ ತಮ್ಮ ಹಿಂದಿನ ಜೀವನದ ಎಲ್ಲ ವಿಷ್ಯವನ್ನೂ ಸಂಗಾತಿ ಮುಂದೆ ಬಿಚ್ಚಿಡುತ್ತಾರೆ. ಕೆಲವೊಮ್ಮೆ ಇದೇ ಪ್ರೀತಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಒಂದು ಪ್ರೀತಿ ಬಿಟ್ಟು ಬಂದವರು ನನ್ನನ್ನು ಬಿಡಲ್ಲ ಎಂಬ ಗ್ಯಾರಂಟಿ ಏನು ಎಂಬ ಸಂಶಯ ಸಂಗಾತಿ ಮನಸ್ಸಲ್ಲಿ ಮೂಡಲು ಕಾರಣವಾಗುತ್ತದೆ.
ಪ್ರೀತಿ ಅತಿಯಾದ್ರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಪ್ರೀತಿ ಹುಚ್ಚಿಗೆ ಬಿದ್ದ ಕೆಲವರು ಸಂಗಾತಿ ಸದಾ ತನ್ನ ಬಳಿ ಇರಬೇಕು. ತನ್ನ ಬಗ್ಗೆಯೇ ಯೋಚನೆ ಮಾಡಬೇಕೆಂಬ ಸ್ವಾರ್ಥಕ್ಕೆ ಬೀಳ್ತಾರೆ. ಇದೂ ಪ್ರೀತಿ ಮುರಿದು ಬೀಳಲು ಒಂದು ಕಾರಣ.
ತನ್ನೆಲ್ಲ ಅಭಿರುಚಿ, ಇಷ್ಟ, ಕಷ್ಟಗಳನ್ನು ಸಂಗಾತಿ ಮುಂದೆ ಹೇಳುವ ಪ್ರೇಮಿ ತನಗಿಷ್ಟವಾಗದ ಕೆಲಸ ಮಾಡಬೇಡ ಎಂದು ಸಂಗಾತಿಗೆ ಕಟ್ಟಪ್ಪಣೆ ಮಾಡ್ತಾನೆ. ಸಂಗಾತಿಯ ಈ ರೇಖೆಯೊಳಗೆ ಜೀವನ ಮಾಡೋದು ಅನೇಕರಿಗೆ ಇಷ್ಟವಾಗುವುದಿಲ್ಲ.
ಇದ್ರ ಜೊತೆಗೆ ಅವಶ್ಯಕ್ಕಿಂತ ಹೆಚ್ಚು ಕಾಳಜಿ. ಈಗಿನ ಕಾಲದಲ್ಲಿ ಎಲ್ಲರೂ ಸ್ವತಂತ್ರವಾಗಿ ಬದುಕಲು ಇಷ್ಟಪಡ್ತಾರೆ. ಅತಿ ಕಾಳಜಿ ಅವರ ಕಿರಿಕಿರಿಗೆ ಕಾರಣವಾಗುತ್ತದೆ.