ಸ್ನೇಹಿತರಲ್ಲಿ ನಾನೊಬ್ಬನೇ ಸಿಂಗಲ್. ಸಂಗಾತಿ ಹುಡುಕೋದು ದೊಡ್ಡ ತಲೆನೋವಾಗಿದೆ. ಮ್ಯಾರೇಜ್ ಪೋರ್ಟಲ್ ನೋಡಿ ನೋಡಿ ಸಾಕಾಗಿದೆ ಎನ್ನುವವರಲ್ಲಿ ನೀವೂ ಒಬ್ಬರಾ? ಕೇವಲ ಮ್ಯಾರೇಜ್ ಪೋರ್ಟಲ್ ನಲ್ಲಿ ಮಾತ್ರವಲ್ಲ ಬೇರೆ ಕಡೆಯೂ ನೀವು ಮೆಚ್ಚುವ ಸಂಗಾತಿ ಸಿಗಬಹುದು.
ಮದುವೆ : ಸಂಗಾತಿ ಹುಡುಕಲು ಎರಡನೇ ಅತ್ಯುತ್ತಮ ಸ್ಥಳ ಮದುವೆ. ಭಾರತದಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತವೆ. ಕೆಲವೊಮ್ಮೆ ಸಂಬಂಧಿಕರು, ಸ್ನೇಹಿತರ ಮದುವೆಗೆ ನಾವು ಹೋಗೋದಿಲ್ಲ. ಆದ್ರೆ ಮದುವೆಯಲ್ಲಿ ನಿಮಗೆ ತುಂಬಾ ಆಯ್ಕೆಗಳಿರುತ್ತವೆ. ದೂರದೂರುಗಳಿಂದ ವಧು-ವರರ ಸಂಬಂಧಿ, ಸ್ನೇಹಿತರು ಮದುವೆಗೆ ಬರ್ತಾರೆ. ಅಲ್ಲಿ ಕೂಡ ನಿಮ್ಮಿಷ್ಟದ ಸಂಗಾತಿ ನಿಮಗೆ ಸಿಗುವ ಸಂಭವ ಹೆಚ್ಚಿರುತ್ತದೆ.
ಜಿಮ್ : ಜಿಮ್ ಬೆವರಿಳಿಸಲು ಮಾತ್ರವಲ್ಲ ಸಂಗಾತಿ ಹುಡುಕಾಟಕ್ಕೂ ಸೂಕ್ತ ಸ್ಥಳ. ಹಾಗಾಂತ ಕಂಡ ಕಂಡ ಹುಡುಗಿಯನ್ನು ಪ್ರಪೋಸ್ ಮಾಡುವುದು ಸರಿಯಲ್ಲ. ಮೊದಲು ಸ್ನೇಹ ಬೆಳೆಸಿ. ನಿಮಗೆ ಹೊಂದುತ್ತಾರೆಂದಾದ್ರೆ ಮಾತ್ರ ಮುಂದುವರೆಯಿರಿ.
ಕಚೇರಿ : ಆಫೀಸ್ ನಲ್ಲಿ ಕೂಡ ಸಂಗಾತಿಯನ್ನು ಹುಡುಕಿಕೊಳ್ಳಬಹುದು. ಆದ್ರೆ ಆತುರ ಬೇಡ. ಮೊದಲು ಸ್ನೇಹ ಬೆಳೆಸಿ. ಅವರು ನಿಮ್ಮ ಬಗ್ಗೆ ಆಸಕ್ತಿ ತೋರಿದಲ್ಲಿ ಕಚೇರಿ ಸಮಯ ಮುಗಿದ ನಂತ್ರ ಮಾತುಕತೆ ನಡೆಸಬಹುದು. ಆದ್ರೆ ನಿಮ್ಮ ನಡವಳಿಕೆ ಬಗ್ಗೆ ಕಚೇರಿಯಲ್ಲಿ ಮಾತನಾಡಿಕೊಳ್ಳದಂತೆ ಎಚ್ಚರ ವಹಿಸಿ.