ಡಿಸೆಂಬರ್ 25ರಂದು ವಿಶ್ವದಾದ್ಯಂತ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಗುತ್ತದೆ.
ಮನೆ ಮನೆಗೆ ದೀಪ ಬೆಳಗಿ, ಅಲಂಕಾರಿಕ ವಸ್ತುಗಳನ್ನು ಹಾಕಿ ಸಂತೋಷದಿಂದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಸ್ ಮಸ್ ಹಬ್ಬದ ದಿನ ಮನೆಯಲ್ಲಿ ಬಳಸುವ ಪ್ರತಿಯೊಂದು ವಸ್ತುಗಳು, ಪದ್ಧತಿಗಳಿಗೆ ವಿಶೇಷ ಅರ್ಥವಿದೆ.
ಯೇಸು ಕ್ರಿಸ್ತನ ಜನ್ಮ ದಿನವನ್ನು ಗಂಟೆ ಬಾರಿಸುವ ಮೂಲಕ ಆಚರಿಸಲಾಗುತ್ತದೆ. ಗಂಟೆ ಬಾರಿಸುವುದ್ರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ನಾಶವಾಗುತ್ತದೆ. ಮನೆ ಮಂದಿಯ ಉತ್ಸಾಹವನ್ನು ಹೆಚ್ಚಿಸಲು ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಕ್ರಿಸ್ ಮಸ್ ದಿನ ಗಂಟೆ ಬಾರಿಸಲಾಗುತ್ತದೆ.
ಕ್ರಿಸ್ ಮಸ್ ದಿನ ಮನೆ ತುಂಬ ಮೇಣದ ಬತ್ತಿಗಳು ಬೆಳಗುತ್ತವೆ. ಈ ಮೇಣದ ಬತ್ತಿ ಮನೆಯ ಸಂತೋಷವನ್ನು ಹೆಚ್ಚಿಸುತ್ತದೆ. ಯೇಸು ಕ್ರಿಸ್ತನ ಮುಂದೆ ಪ್ರತಿಯೊಬ್ಬರೂ ಮೇಣದ ಬತ್ತಿಯನ್ನು ಬೆಳಗುತ್ತಾರೆ. ಜೀವನದಲ್ಲಿ ಬೆಳಕು ಹಾಗೂ ಸಂತೋಷ ತರಲು ಇದು ಸಹಕಾರಿ. ವಿಭಿನ್ನ ಬಣ್ಣಗಳ ಮೇಣದ ಬತ್ತಿ ಎಲ್ಲರ ಮನಸ್ಸಿನಲ್ಲಿ ಸಂತೋಷ ಮನೆ ಮಾಡುವಂತೆ ಮಾಡುತ್ತದೆ.
ಕ್ರಿಸ್ ಮಸ್ ದಿನ ಕೇಕ್ ಗೆ ವಿಶೇಷ ಮಹತ್ವವಿದೆ. ಕೇಕ್ ಕತ್ತರಿಸಿ ಕ್ರಿಸ್ ಮಸ್ ಆಚರಿಸಲಾಗತ್ತದೆ. ಏಸು ಕ್ರಿಸ್ತನ ಹುಟ್ಟುಹಬ್ಬದ ಸಿಹಿಯೆಂದ್ರೆ ಕೇಕ್. ಇದ್ರ ಸೇವನೆ ಸಂತೋಷವನ್ನು ನೀಡುತ್ತದೆ. ಮನಸ್ಸಿನ ಒತ್ತಡವನ್ನು ನಿವಾರಿಸುತ್ತದೆ. ಹಾಗಾಗಿಯೇ ಜನರು ಪರಸ್ಪರ ಕೇಕನ್ನು ಉಡುಗೊರೆ ರೂಪದಲ್ಲಿ ನೀಡುತ್ತಾರೆ.
ಕ್ರಿಸ್‌ಮಸ್ ಸಂತೋಷದ ಹಬ್ಬ. ಈ ದಿನ ಜನರು ಪರಸ್ಪರ ಸಂತೋಷವನ್ನು ಹಂಚಿಕೊಳ್ಳಲು ಬಯಸುತ್ತಾರೆ. ಇದೇ ಕಾರಣಕ್ಕೆ ಅನೇಕ ರೀತಿಯ ಉಡುಗೊರೆಗಳನ್ನು ನೀಡುತ್ತಾರೆ. ಕೆಲವರು ಅಗತ್ಯವಿರುವ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುವುದರಿಂದ ಸಮಸ್ಯೆ ನಿವಾರಣೆಯಾಗಿ ಸಂತೋಷ ಹೆಚ್ಚಾಗುತ್ತದೆ.
ಕ್ರಿಸ್‌ಮಸ್ ದಿನದಂದು ಮಧ್ಯರಾತ್ರಿ ಪ್ರಾರ್ಥನೆ ನಡೆಯುತ್ತದೆ. ಎಲ್ಲರೂ ಒಟ್ಟಿಗೆ ಸೇರಿ ಮಾಡುವ ಪ್ರಾರ್ಥನೆ ಒಟ್ಟಿಗೆ ವಾಸಿಸುವ ಸಂದೇಶವನ್ನು ನೀಡುತ್ತದೆ.
ಸಾಂಟಾ ಕ್ಲಾಸ್, ಮಕ್ಕಳ ಆಸೆಗಳನ್ನು ಈಡೇರಿಸುವ ಮತ್ತು ಅವರ ಜೀವನದ ಪ್ರತಿಯೊಂದು ದುಃಖವನ್ನು ಹೋಗಲಾಡಿಸಲು ಪ್ರಯತ್ನಿಸುವ ಒಂದು ರೀತಿ.
ಕ್ರಿಸ್‌ಮಸ್‌ನಲ್ಲಿ ಕ್ರಿಸ್‌ಮಸ್ ಟ್ರೀ ಬಹಳ ಮುಖ್ಯ. ಕ್ರಿಸ್ ಮಸ್ ವೃಕ್ಷವನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ಇರುತ್ತದೆ. ಕ್ರಿಸ್‌ಮಸ್ ಮರವು ಎಲ್ಲಾ ಋತುಗಳಲ್ಲಿಯೂ ಹಸಿರಾಗಿರುವ ಕಾರಣ ಜೀವನದ ಯಾವುದೇ ಸಮಯದಲ್ಲಿ ಭಯಪಡಬಾರದು. ಎಲ್ಲವನ್ನೂ ಧೈರ್ಯವಾಗಿ ಎದುರಿಸಬೇಕು ಎಂಬುದು ಇದ್ರ ಸಂದೇಶ.