ಕೈನಲ್ಲೊಂದು ಮೊಬೈಲ್ ಇದ್ದರೆ ಜನ ಜಗತ್ತನ್ನು ಮರೆಯುತ್ತಾರೆ. ಹಗಲು ರಾತ್ರಿಯೆನ್ನದೆ ಜನ ಮೊಬೈಲ್ ನಲ್ಲಿ ಬ್ಯುಸಿಯಿರುತ್ತಾರೆ. ಮನೆಯವರ ಬೈಗುಳ ಅಥವಾ ವಾರ್ಡನ್ ಕಣ್ಣಿಗೆ ಕಾಣದಂತೆ ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ ಬಳಸುವವರ ಸಂಖ್ಯೆ ಜಾಸ್ತಿಯಾಗಿದೆ. ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ ಬಳಸುವುದು ಅಪಾಯ ಆಹ್ವಾನಿಸಿದಂತೆ.
ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ ಬಳಸುವುದರಿಂದ ಕುರುಡುತನ ಬರಲಿದೆ. 22 ವರ್ಷದ ಹಾಗೂ 40 ವರ್ಷದ ಮಹಿಳೆಯರಿಗೆ ಆಗಾಗ ಕತ್ತಲಾವರಿಸುತ್ತಿತ್ತಂತೆ. ಈ ಬಗ್ಗೆ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಬಂದಿದ್ದಾರೆ.
ಮಹಿಳೆ ಅಥವಾ ಪುರುಷ ಹಾಸಿಗೆ ಮೇಲೆ ಮಾಡಲೇಬೇಡಿ ಈ ಕೆಲಸ
ಯಾವುದೇ ಪರೀಕ್ಷೆ ನಡೆಸಿದ್ರೂ ಇದಕ್ಕೆ ಕಾರಣ ತಿಳಿಯಲಿಲ್ಲ. ನಂತ್ರ ಅವರ ದಿನಚರಿ ಬಗ್ಗೆ ಕೇಳಲಾಗಿದೆ. ಆಗ ರಾತ್ರಿ ಸ್ಮಾರ್ಟ್ ಫೋನ್ ಬಳಸಿದ ನಂತ್ರ ಕಣ್ಣಿಗೆ ಕತ್ತಲೆ ಆವರಿಸುತ್ತದೆ ಎಂದಿದ್ದಾರೆ ಈ ಮಹಿಳೆಯರು. ಅವರಿಗೆ ಕತ್ತಲಲ್ಲಿ ಸ್ಮಾಟ್ ಫೋನ್ ಬಳಸದಂತೆ ಸೂಚಿಸಲಾಗಿತ್ತು. ಆದ್ರೆ ಇದರ ಬಗ್ಗೆ ಗಮನ ನೀಡದ ಮಹಿಳೆಯರು ಕಣ್ಣು ಕಳೆದುಕೊಂಡಿದ್ದಾರೆ.