ಆತುರದ ಪ್ರೀತಿ, ಅವಸರದ ಬ್ರೇಕ್ ಅಪ್ ಈಗ ಜಾಸ್ತಿಯಾಗ್ತಿದೆ. ಇಬ್ಬರ ನಡುವೆ ಪ್ರೀತಿ ಬೇಕೇಬೇಕು. ಆದ್ರೆ ಅಗತ್ಯಕ್ಕಿಂತ ಪ್ರೀತಿ ಹೆಚ್ಚಿದ್ದರೆ ಅದು ಕಷ್ಟ. ಅಗತ್ಯಕ್ಕಿಂತ ಹೆಚ್ಚು ಪ್ರೀತಿ ಇಬ್ಬರನ್ನು ಬೇರ್ಪಡಿಸಲು ಕಾರಣವಾಗುತ್ತದೆ. ಇದು ಸಂಶೋಧನೆಯೊಂದರಿಂದ ಹೊರಬಿದ್ದಿದೆ.
ದಂಪತಿ ದೂರವಾಗಲು ಅಗತ್ಯಕ್ಕಿಂತ ಹೆಚ್ಚು ಪ್ರೀತಿ ಇರುವುದು ಕಾರಣ ಎಂದು ಸಂಶೋಧನೆ ಹೇಳಿದೆ. ಸಂಗಾತಿಯನ್ನು ಅತಿ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿ ಅವರಿಂದಲೂ ಅಷ್ಟೇ ಪ್ರಮಾಣದಲ್ಲಿ ಪ್ರೀತಿ ನಿರೀಕ್ಷೆ ಮಾಡ್ತಾನೆ. ಇದನ್ನು ಸಂಗಾತಿ ಅರ್ಥ ಮಾಡಿಕೊಳ್ಳದೆ ಹೋದಲ್ಲಿ ಸಂಬಂಧ ಬಿರುಕು ಬಿಡಲು ಶುರುವಾಗುತ್ತದೆ.
ತನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ತಿಲ್ಲ ಎಂದು ಒಬ್ಬರು ಭಾವಿಸಿದ್ರೆ ನನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗ್ತಿದೆ ಎಂದು ಇನ್ನೊಬ್ಬರು ಭಾವಿಸ್ತಾರೆ. ಈ ಮಧ್ಯೆ ಇಬ್ಬರೂ ತಮಗೆ ಸೂಕ್ತವೆನಿಸುವ ಇನ್ನೊಬ್ಬ ಸಂಗಾತಿ ಹುಡುಕಾಟ ನಡೆಸ್ತಾರೆ.
ʼಪ್ರೀತಿ – ದುಃಖʼ ಇವುಗಳಲ್ಲಿ ಅಪ್ಪುಗೆ ಎಷ್ಟು ಮುಖ್ಯ ನಿಮಗೆ ಗೊತ್ತಾ…?
ಮನಸ್ಸಿನಲ್ಲಿಯೇ ಒಬ್ಬರ ಬಗ್ಗೆ ಒಬ್ಬರು ಕಿರಿಕಿರಿ ಅನುಭವಿಸುವ ಬದಲು ತಮ್ಮ ತಮ್ಮ ನಿಲುವಿನ ಬಗ್ಗೆ ಮಾತುಕತೆ ನಡೆಸಿದ್ರೆ ಎಲ್ಲವೂ ಸರಿಯಾಗಲಿದೆ. ಬದಲಾವಣೆಗೆ ಸಮಯ ಬೇಕು. ಸಂಗಾತಿಗೆ ಸಮಯ ನೀಡಿದಲ್ಲಿ ಎಲ್ಲವೂ ಬದಲಾಗಲು ಸಾಧ್ಯ. ಸಮಯ ನೀಡಿಯೂ ಹೊಂದಾಣಿಕೆ ಸಾಧ್ಯವಿಲ್ಲವೆಂದಾಗ ಮತ್ತೊಮ್ಮೆ ಮಾತುಕತೆ ನಡೆಸಿ ಬೇರೆಯಾಗುವ ನಿರ್ಧಾರಕ್ಕೆ ಬನ್ನಿ.
ಆರಂಭದಲ್ಲಿ ತೋರಿಸಿದ ಪ್ರೀತಿ ಸಮಯ ಕಳೆದಂತೆ ಬದಲಾಗುತ್ತದೆ. ಜವಾಬ್ದಾರಿ ಹೆಚ್ಚಾದಂತೆ ಇಬ್ಬರೂ ಬದಲಾಗ್ತಾ ಬರ್ತಾರೆ. ಆದ್ರೆ ಆತುರದಲ್ಲಿ ದೂರ ಹೋಗುವ ನಿರ್ಧಾರ ಸರಿಯಲ್ಲ.