ಮೂರು ತಿಂಗಳುಗಳ ಕಾಲ ಮನೆಯಿಂದ ಹೊರಗೆ ಇದ್ದ ಯುವತಿಯೊಬ್ಬರು ಮರಳಿ ತಮ್ಮ ಗೂಡಿಗೆ ಬಂದಾಗ ಮನೆತುಂಬಾ ಆಲೂಗಡ್ಡೆ ಚಿಗುರು ಮೊಳೆತದ್ದನ್ನು ಕಂಡು ಬೆರಗಾಗಿದ್ದಾರೆ.
ಫ್ರಾನ್ಸ್ನ ಕೇನಿನ್ ಎಂಬ ಊರಿನವರಾದ ಡೊನ್ನಾ ಪೊರೀ, ಮಾರ್ಚ್ನಲ್ಲಿ ಸೂಪರ್ ಮಾರ್ಕೆಟ್ ಒಂದರಿಂದ ಒಂದು ಬ್ಯಾಗ್ನಲ್ಲಿ ಆಲೂಗಡ್ಡೆ ಖರೀದಿ ಮಾಡಿಕೊಂಡು ಬಂದಿದ್ದರು. ಆದರೆ ಇದಾದ ಬೆನ್ನಿಗೇ ಲಾಕ್ಡೌನ್ ಘೋಷಣೆಯಾದ ಕಾರಣ ಅವರು ತಮ್ಮ ಬಾಯ್ಫ್ರೆಂಡ್ ಜೊತೆಗೆ ಪಕ್ಕದ ಏರಿಯಾದಲ್ಲಿ ಕಾಲ ಕಳೆಯಲು ನಿರ್ಧರಿಸಿ, ಅಲ್ಲಿಂದ ಹೋಗಿದ್ದರು.
ಬಾಯ್ಫ್ರೆಂಡ್ ಮನೆಯಿಂದ ಮತ್ತೆ ತನ್ನ ಮನೆಗೆ ಬಂದ 22 ವರ್ಷದ ಈ ಯುವತಿಗೆ ತನ್ನ ಮನೆಯ ಅಡುಗೆಮನೆಯಲ್ಲಿ ಆಲೂಗಡ್ಡೆ ಮೊಳೆತು ನಿಂತು ಅಲ್ಲೆಲ್ಲಾ ಹಬ್ಬಿರುವುದನ್ನು ಕಂಡು ಬೆರಗಾಗಿದ್ದಾರೆ.
https://twitter.com/donna9p/status/1271455781007884288?ref_src=twsrc%5Etfw%7Ctwcamp%5Etweetembed%7Ctwterm%5E1271455781007884288%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fpotatoes-take-over-womans-home-while-she-was-away-for-3-months%2F616177