ಪ್ರತಿಯೊಬ್ಬ ಮಹಿಳೆಗೂ ಕೆಲವೊಂದು ವೈಯಕ್ತಿಕ ಹಕ್ಕಿದೆ. ಇದನ್ನು ಮಹಿಳೆಯರಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಮಹಿಳೆಯಾದವಳು ವಿರೋಧ ವ್ಯಕ್ತಪಡಿಸಬಹುದು. ಇದು ಕೂಡ ಆಕೆ ಹಕ್ಕಿನಲ್ಲಿ ಸೇರಿರುತ್ತದೆ.
ಮಹಿಳಾ ಆರೋಪಿಯಾದವಳು ಇಚ್ಛಿಸಿದ್ರೆ ಮಹಿಳಾ ವೈದ್ಯರಿಂದಲೇ ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಇದ್ರ ಜೊತೆಗೆ ಪೂರ್ವಜರ ಆಸ್ತಿ ಮೇಲೆ ಮಹಿಳೆ ಹಾಗೂ ಪುರುಷನಿಗೆ ಸಮಪಾಲಿರುತ್ತದೆ. ಲೈಂಗಿಕ ಕಿರುಕುಳವಾದಲ್ಲಿ ಮಹಿಳೆ ಕಾನೂನಿನ ಮೂಲಕ ಹೋರಾಟ ನಡೆಸುವ ಅವಕಾಶವಿದೆ.
ಪ್ರತಿಯೊಬ್ಬ ಮಹಿಳೆಗೂ ಲೈಂಗಿಕ ಕಿರುಕುಳದಿಂದ ರಕ್ಷಣೆ ಪಡೆಯುವ ಹಕ್ಕಿದೆ. ಯಾವುದೇ ಪುರುಷ, ಮಹಿಳೆಗೆ ಲೈಂಗಿಕವಾಗಿ ಕಮೆಂಟ್ ಮಾಡಿದಲ್ಲಿ ಕೂಡ ಒಂದು ವರ್ಷ ಜೈಲು ಶಿಕ್ಷೆಯಾಗಲಿದೆ.
ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಮಹಿಳೆಗಿದೆ. ಗರ್ಭಪಾತ ಕಾನೂನಿನಲ್ಲಿ ಅಪರಾಧ. ಆದ್ರೆ ಈ ಗರ್ಭದಿಂದ ತಾಯಿ ಜೀವ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದಾದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಗರ್ಭಪಾತ ಮಾಡಿಸಿಕೊಳ್ಳಬಹುದಾಗಿದೆ.
ಮಹಿಳೆಗೆ ಸ್ವಾತಂತ್ರ್ಯದ ಹಕ್ಕಿದೆ. ಆಕೆ ಏನೇ ತಪ್ಪು ಮಾಡಿರಲಿ ಆಕೆಯನ್ನು ಒಬ್ಬ ಮಹಿಳಾ ಅಧಿಕಾರಿ ಮಾತ್ರ ತಪಾಸಣೆ ಮಾಡಬೇಕಾಗುತ್ತದೆ.
ಗರ್ಭಿಣಿಗೆ 26 ವಾರಗಳ ಮೆಟರ್ನಿಟಿ ಲಿವ್ ಸಿಗಲಿದೆ. ಈ ವೇಳೆ ಆಕೆ ಸಂಬಳ ಕೂಡ ಕಟ್ ಆಗುವುದಿಲ್ಲ.
ಮಹಿಳೆಗೆ ಮನೆ ಸದಸ್ಯರು ಹೊಡೆದು ಹಲ್ಲೆ ಮಾಡುವಂತಿಲ್ಲ. ಮನೆಯವರು ಕಿರುಕುಳ ನೀಡಿದಲ್ಲಿ ಮಹಿಳೆ ಅವ್ರ ವಿರುದ್ಧ ನ್ಯಾಯಾಲಯದಲ್ಲಿ ದೂರು ಸಲ್ಲಿಸಬಹುದಾಗಿದೆ.
ಮಹಿಳೆ ಮೇಲೆ ಯಾವುದೇ ಆರೋಪವಿದ್ದರೆ ಇಲ್ಲ ಅತ್ಯಾಚಾರಕ್ಕೊಳಗಾಗಿದ್ದರೆ ಆಕೆ ತನ್ನ ಪರಿಚಯ ಹೇಳಬೇಕಿಲ್ಲ. ಮುಖವನ್ನು ಎಲ್ಲರೆದುರು ತೋರಿಸಬೇಕಾಗಿಲ್ಲ. ಪೊಲೀಸ್, ಮಾಧ್ಯಮಗಳು ಕೂಡ ಇದಕ್ಕೆ ಒತ್ತಡ ಹೇರುವಂತಿಲ್ಲ.