ಮದುವೆಯಾದ್ಮೇಲೆ ಪುರುಷರು ಹಾಗೂ ಮಹಿಳೆಯರ ತೂಕ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ನಿಮ್ಮ ತೂಕ ಕೂಡ ಏರ್ತಿದ್ದರೆ ಎಚ್ಚರ. ಹೆಚ್ಚಿನ ತೂಕ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತೆ ಎಂದು ಇತ್ತೀಚಿಗೆ ನಡೆದ ಅಧ್ಯಯನವೊಂದು ಹೇಳಿದೆ.
ಅಧ್ಯಯನದ ಪ್ರಕಾರ ತೂಕ ಹೆಚ್ಚಾಗ್ತಿದ್ದಂತೆ ಸೆಕ್ಸ್ ಮೇಲಿನ ಆಸಕ್ತಿ ಕಡಿಮೆಯಾಗ್ತಾ ಬರುತ್ತೆ. ಇದಕ್ಕೆ ಮಾನಸಿಕ ಕಾರಣ ನೀಡ್ತಾರೆ ಸಂಶೋಧಕರು. ತೂಕ ಹೆಚ್ಚಾಗ್ತಿದ್ದಂತೆ ದೇಹ ಸೌಂದರ್ಯ ಕಳೆದುಕೊಳ್ಳುತ್ತದೆ. ದಢೂತಿ ದೇಹ ನೋಡಿ ಸಂಗಾತಿ ಮನಸ್ಸು ಬದಲಾಗಬಹುದೆಂಬ ಆತಂಕ ಸ್ಥೂಲಕಾಯದ ವ್ಯಕ್ತಿಗಳನ್ನು ಕಾಡುತ್ತದೆಯಂತೆ. ಅಧ್ಯಯನಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇಕಡಾ 72ರಷ್ಟು ಮಂದಿ ಸೆಕ್ಸ್ ನಲ್ಲಿ ಆಸಕ್ತಿಯಿಲ್ಲವೆಂದಿದ್ದಾರೆ. ಇದಕ್ಕೆ ಸ್ಥೂಲಕಾಯ ಕಾರಣ ಎಂದಿದ್ದಾರೆ.
ತೂಕ ಕಡಿಮೆಯಿರುವ ಶೇಕಡಾ 88ರಷ್ಟು ಮಂದಿ ಸೆಕ್ಸ್ ನಲ್ಲಿ ಅತಿಯಾಗಿ ಆಸಕ್ತಿ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಇಷ್ಟೇ ಅಲ್ಲ ಸ್ಥೂಲಕಾಯ ಹೊಂದಿದ್ದೂ ಸೆಕ್ಸ್ ಬಯಸುವವರ ಸಂಖ್ಯೆ ಶೇಕಡಾ 65ರಷ್ಟಿದೆ.