ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮನೆಯಲ್ಲಿಯೇ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಆಸ್ಪತ್ರೆಗೆ ದಾಖಲಾಗ್ತಿರುವ ಬಹುತೇಕ ರೋಗಿಗಳಿಗೆ ಉಸಿರಾಟದ ಸಮಸ್ಯೆ ಕಾಡ್ತಿದೆ. ಆಕ್ಸಿಜನ್ ಸರಿಯಾಗಿ ಸಿಗದ ಕಾರಣ ಅನೇಕರು ಸಾವನ್ನಪ್ಪುತ್ತಿದ್ದಾರೆ. ಇದ್ರಿಂದ ಹೆದರಿರುವ ಜನರು ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸಂಗ್ರಹಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಆಕ್ಸಿಜನ್ ಸಿಲಿಂಡರ್ ಮನೆಯಲ್ಲಿ ಸಂಗ್ರಹಿಸಿಡುವುದು ಸರಿಯಲ್ಲ.
ಆಕ್ಸಿಜನ್ ಮಟ್ಟ 93ಕ್ಕೆ ಇಳಿಯುತ್ತಿದ್ದಂತೆ ಜನರು ಭಯಗೊಳ್ತಿದ್ದಾರೆ. ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಆದ್ರೆ ಆಕ್ಸಿಜನ್ ಮಟ್ಟ ಎಷ್ಟಿರಬೇಕೆಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಬ್ಲಡ್ ಸೆಲ್ಸ್ ನಲ್ಲಿ ಆಮ್ಲಜನಕ ಎಷ್ಟಿದೆ ಎಂಬುದನ್ನು ಆಕ್ಸಿಮೀಟರ್ ನಿಂದ ಪತ್ತೆ ಹಚ್ಚಬಹುದು. ಯಾವುದೇ ವ್ಯಕ್ತಿಯ ಆಕ್ಸಿಜನ್ ಮಟ್ಟ 96 ಇದ್ದಲ್ಲಿ, ಅವ್ರ ಬ್ಲಡ್ ಸೆಲ್ಸ್ ನಲ್ಲಿ ಆಕ್ಸಿಜನ್ ಮಟ್ಟ ಕೇವಲ 4ರಷ್ಟು ಕಡಿಮೆಯಿದೆ ಎಂದರ್ಥ.
ಆರೋಗ್ಯವಂತ ವ್ಯಕ್ತಿ ಆಕ್ಸಿಜನ್ ಮಟ್ಟ 95ರಿಂದ 100 ಇರಬೇಕು. 95ಕ್ಕಿಂತ ಕಡಿಮೆ ಇದ್ದಲ್ಲಿ ಆ ವ್ಯಕ್ತಿ ಶ್ವಾಸಕೋಶದಲ್ಲಿ ಸಮಸ್ಯೆಯಿದೆ ಎಂದರ್ಥ. ಆಕ್ಸಿಜನ್ ಮಟ್ಟ 92-91ರಲ್ಲಿದ್ದರೆ ವೈದ್ಯರನ್ನು ಭೇಟಿಯಾಗುವ ಅಗತ್ಯವಿದೆ. ಆಕ್ಸಿಜನ್ ಮಟ್ಟ 90ಕ್ಕೆ ಇಳಿದ್ರೂ ಭಯಪಡುವ ಅಗತ್ಯವಿಲ್ಲವೆಂದು ವೈದ್ಯರು ಹೇಳ್ತಾರೆ.
ಮಧ್ಯದ ಬೆರಳಿಗೆ ಆಕ್ಸಿಮೀಟರ್ ಇಟ್ಟು ಆಕ್ಸಿಜನ್ ಮಟ್ಟವನ್ನು ಪತ್ತೆ ಮಾಡಲಾಗುತ್ತದೆ. ಈ ವೇಳೆ ಕೈಗೆ ಯಾವುದೇ ಎಣ್ಣೆ, ನೇಲ್ ಪಾಲಿಶ್ ಸೇರಿದಂತೆ ಯಾವುದೇ ವಸ್ತು ಇರಬಾರದು. ಕೈ ಬೆರಳು ಒಣಗಿರಬೇಕು. ಕೈಗಳನ್ನು ನೇರವಾಗಿಟ್ಟುಕೊಂಡು ಪರೀಕ್ಷೆ ಮಾಡಬೇಕು.
ಹೊಟ್ಟೆ ಮೇಲೆ ಮಲಗಿ ದೊಡ್ಡದಾಗಿ ಉಸಿರು ತೆಗೆದುಕೊಳ್ಳುವ ಮೂಲಕ ಆಕ್ಸಿಜನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಕುತ್ತಿಗೆ ಕೆಳಗೆ ಒಂದು ದಿಂಬು, ಹೊಟ್ಟೆ ಕೆಳಗೆ ಎರಡು ದಿಂಬು ಹಾಗೂ ಕಾಲು ಕೆಳಗೆ ಒಂದು ದಿಂಬನ್ನು ಇಟ್ಟು ಉಸಿರು ತೆಗೆದುಕೊಳ್ಳಬೇಕು. ದಿನದ 6ರಿಂದ 8 ಗಂಟೆ ಮಧ್ಯೆ 40 ನಿಮಿಷ ಈ ವ್ಯಾಯಾಮ ಮಾಡಿದ್ರೆ ಆಕ್ಸಿಜನ್ ಮಟ್ಟ ಹೆಚ್ಚಾಗಲಿದೆ.