‘ಲವ್ ಎಟ್ ಫಸ್ಟ್ ಸೈಟ್’ ಅನ್ನೋ ಮಾತೇ ಇದೆ. ಆದ್ರೆ ಈ ಮೊದಲ ನೋಟದಲ್ಲಾಗುವ ಪ್ರೇಮದ ಬಗ್ಗೆ ಆಘಾತಕಾರಿ ಸತ್ಯವೊಂದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ನೆದರ್ಲೆಂಡ್ ಯೂನಿವರ್ಸಿಟಿಯಲ್ಲಿ ಮನಃಶಾಸ್ತ್ರಜ್ಞರು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಮೊದಲ ನೋಟದಲ್ಲಿ ಆಗುವುದು ಪ್ರೇಮವಲ್ಲ, ಕಾಮ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. ಒಟ್ಟು 396 ಜನರನ್ನು ಪರೀಕ್ಷೆಗೆ ಒಳಪಡಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಆನ್ ಲೈನ್ ಸಮೀಕ್ಷೆಯಲ್ಲಿ ಅವರ ರೊಮ್ಯಾಂಟಿಕ್ ಸಂಬಂಧ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಆಕರ್ಷಣೆ, ಪ್ರೀತಿ, ಭಾವೋದ್ರೇಕ, ಬದ್ಧತೆ ಇವೆಲ್ಲವುಗಳ ಬಗ್ಗೆ ಫೋಟೋಗಳನ್ನು ತೋರಿಸಿ ಪ್ರಶ್ನಿಸಲಾಗಿತ್ತು. ತಮಗೆಲ್ಲರಿಗೂ ಮೊದಲ ನೋಟದಲ್ಲಿ ಪ್ರೀತಿ ಅಂಕುರಿಸಿದೆ ಎಂಬ ಭ್ರಮೆ ಅವರಲ್ಲಿತ್ತು.
ಆದ್ರೆ ನಿಜಕ್ಕೂ ಅವರಲ್ಲಿ ಹುಟ್ಟಿಕೊಂಡಿದ್ದು ದೈಹಿಕ ಆಕರ್ಷಣೆ. ಹಾಗಾಗಿ ಮೊದಲ ನೋಟದ ಪ್ರೇಮ ಅನ್ನೋ ಕಾನ್ಸೆಪ್ಟ್ ಸುಳ್ಳು ಅನ್ನೋದು ಸಂಶೋಧಕರ ಅಭಿಪ್ರಾಯ. ನಿಜವಾದ ಪ್ರೀತಿಗೂ ಮೊದಲ ನೋಟಕ್ಕೂ ಸಂಬಂಧವೇ ಇಲ್ಲ ಎನ್ನುತ್ತಾರೆ ಅವರು.