
ಸೆಕ್ಸ್ ವೇಳೆ ದಂಪತಿ ಮಧ್ಯೆ ಇರುವ ಕೆಮೆಸ್ಟ್ರಿ ಲೈಂಗಿಕ ಜೀವನವನ್ನು ಸುಖಕರಗೊಳಿಸುತ್ತದೆ. ಆದ್ರೆ ಸೆಕ್ಸ್ ವೇಳೆ ಪುರುಷರು ಮಾಡುವ ಕೆಲ ತಪ್ಪು ದಂಪತಿ ಮಧ್ಯೆ ಕೆಮೆಸ್ಟ್ರಿ ಹಾಳಾಗಲು ಕಾರಣವಾಗುವ ಜೊತೆಗೆ ಲೈಂಗಿಕ ಜೀವನವನ್ನೇ ಹಾಳು ಮಾಡುವ ಸಾಧ್ಯತೆಯಿರುತ್ತದೆ.
ಸೆಕ್ಸ್ ಒತ್ತಾಯದ ಮೂಲಕ ಮಾಡುವಂತಹದ್ದಲ್ಲ. ಪುರುಷರಿಗೆ ಸಂಭೋಗದ ಇಚ್ಛೆಯಿದ್ದು, ಸಂಗಾತಿಗೆ ಮನಸ್ಸಿಲ್ಲವಾದ್ರೆ ಒತ್ತಾಯ ಮಾಡಬೇಡಿ. ಸಂಗಾತಿ ಒಲ್ಲೆ ಎಂದ್ರೆ ಅಲ್ಲಿಗೆ ಬಿಟ್ಟು ಬಿಡಿ. ಒತ್ತಾಯದ ಸೆಕ್ಸ್ ತೃಪ್ತಿ ನೀಡುವ ಬದಲು ಮನಸ್ತಾಪಕ್ಕೆ ಕಾರಣವಾಗಬಹುದು.
ಸಂಭೋಗದ ವಿಚಾರದಲ್ಲಿ ಮಹಿಳೆಯರು ನಿಧಾನವಾಗಿ ಉತ್ತೇಜನಗೊಳ್ತಾರೆ. ಅವಸರದ ಸೆಕ್ಸ್ ಅವ್ರಿಗೆ ಇಷ್ಟವಾಗುವುದಿಲ್ಲ. ಆರಂಭದಲ್ಲಿ ಫೋರಲ್ ಕೆಮೆಸ್ಟ್ರಿ ಹೆಚ್ಚಿಸಿಕೊಳ್ಳಿ. ಆಗ ಮಾತ್ರ ಸಂಗಾತಿ ಪೂರ್ಣ ಪ್ರಮಾಣದಲ್ಲಿ ಸಂಭೋಗಕ್ಕೆ ಸಿದ್ಧವಾಗ್ತಾಳೆ ಎಂಬುದು ನೆನಪಿರಲಿ.
ಸಾಮಾನ್ಯವಾಗಿ ಸೆಕ್ಸ್ ವಿಚಾರದಲ್ಲಿ ನಮಗೆಲ್ಲ ಗೊತ್ತಿದೆ ಎನ್ನುವ ರೀತಿ ಪುರುಷರು ವರ್ತಿಸುತ್ತಾರೆ. ಅನೇಕ ಪ್ರಯೋಗಗಳಿಗೆ ಮುಂದಾಗ್ತಾರೆ. ಇದು ಸಂಗಾತಿಗೆ ಇಷ್ಟವಾಗದೆ ಹೋಗಬಹುದು. ಹಾಗಾಗಿ ಸಂಗಾತಿ ಇಚ್ಛೆಗೂ ಮಹತ್ವ ನೀಡಿ.
ದೈಹಕವಾಗಿಯೊಂದೇ ಅಲ್ಲ ಭಾವನಾತ್ಮಕ ಹೊಂದಾಣಿಕೆ ಬಹಳ ಮುಖ್ಯ. ಮಹಿಳೆಯರು ಭಾವನೆಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಹಾಗಾಗಿ ನಿಮ್ಮ ಭಾವನೆಗಳಿಗೊಂದೇ ಅಲ್ಲ ಅವ್ರ ಭಾವನೆಗಳಿಗೂ ಸ್ಪಂದಿಸಿ. ಭಾವನಾತ್ಮಕವಾಗಿ ಒಂದಾಗಲು ಯತ್ನಿಸಿ.