ಸೆಕ್ಸ್ ನಂತ್ರ ಪುರುಷರು ವಿಚಿತ್ರವಾಗಿ ವರ್ತಿಸ್ತಾರೆ. ಇದು ಮಹಿಳೆಯರ ಚಿಂತೆ ಹಾಗೂ ಒತ್ತಡಕ್ಕೆ ಕಾರಣವಾಗುತ್ತದೆ. ಸೆಕ್ಸ್ ನಂತ್ರ ಸಂಗಾತಿ ಯಾಕೆ ಹೀಗೆ ಮಾಡ್ತಾರೆ ಎಂದು ಆಕೆ ರಾತ್ರಿ ಪೂರ್ತಿ ಯೋಚನೆ ಮಾಡುವುದುಂಟು. ಇದಕ್ಕೆ ಕಾರಣ ಏನು ಎಂಬುದನ್ನು ನಾವು ಹೇಳ್ತೇವೆ ನೋಡಿ.
ಸಂಭೋಗದಲ್ಲಿ ಉತ್ತುಂಗಕ್ಕೇರಿದ ನಂತ್ರ ಪುರುಷರಿಗೆ ಆಯಾಸದ ಅನುಭವವಾಗುತ್ತದೆ. ಆಯಾಸದಲ್ಲಿ ಪತ್ನಿಯ ಮನಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಹಾಸಿಗೆಗೆ ತಲೆಯೊಡ್ಡುತ್ತಾರೆ. ಇದು ಮಹಿಳೆಯರ ಬೇಸರಕ್ಕೆ ಕಾರಣವಾಗುತ್ತದೆ.
ಸೆಕ್ಸ್ ನಂತ್ರ ಕ್ಯಾಲೋರಿ ಬರ್ನ್ ಆಗುವುದ್ರಿಂದ ಸುಸ್ತಾಗುತ್ತದೆ. ಇದು ಅವರ ದೇಹವನ್ನು ದುರ್ಬಲಗೊಳಿಸುತ್ತದೆ. ಬಯಸಿದ್ರೂ ಸಂಭೋಗದ ನಂತ್ರ ಅವರಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ.
ಲೈಂಗಿಕ ಕ್ರಿಯೆ ನಂತ್ರ ಹಾರ್ಮೋನುಗಳ ಸ್ರವಿಸುವಿಕೆ ವೇಗ ಪಡೆಯುತ್ತದೆ. ಆಕ್ಸಿಟೋಸಿನ್ ಎಂಬ ರಾಸಾಯನಿಕ ಶೀಘ್ರವಾಗಿ ಬಿಡುಗಡೆಯಾಗುತ್ತದೆ. ಇದು ತಕ್ಷಣ ನಿದ್ರೆ ಬರುವಂತೆ ಮಾಡುತ್ತದೆ.
ಸೆಕ್ಸ್ ನಂತ್ರ ಪ್ರತಿಯೊಬ್ಬ ಮಹಿಳೆಯರು ಸಂಗಾತಿಯ ಆಪ್ತತೆಯನ್ನು ಬಯಸುತ್ತಾರೆ. ಸಂಗಾತಿ ಹಗ್ ಮಾಡ್ಲಿ. ಪ್ರೀತಿಯ ಮಾತುಗಳನ್ನಾಡ್ಲಿ ಎಂದು ಮಹಿಳೆಯಾದವಳು ಬಯಸ್ತಾಳೆ. ಆದ್ರೆ ಇದೆಲ್ಲ ಕಾರಣಕ್ಕೆ ಪುರುಷರು ಸೆಕ್ಸ್ ನಂತ್ರ ನಿದ್ರೆಗೆ ಜಾರುತ್ತಾರೆ.