ವಿಶ್ವದ ಎಲ್ಲಾ ರಾಷ್ಟ್ರಗಳ ಬಾವುಟ, ರಾಜಧಾನಿಗಳ ಹೆಸರನ್ನ ನೆನಪಿನಲ್ಲಿ ಇಟ್ಟುಕೊಳ್ಳೋದು ಅಂದರೆ ಸುಲಭದ ಕೆಲಸವಂತೂ ಅಲ್ವೇ ಅಲ್ಲ. ಅಂತದ್ರಲ್ಲಿ ನಿಮಗೆನಾದ್ರೂ ನೂರಕ್ಕೂ ಹೆಚ್ಚು ದೇಶಗಳ ಬಗ್ಗೆ ಮಾಹಿತಿ ಇದೆ ಅಂದರೆ ನಿಮ್ಮನ್ನ ಬುದ್ಧಿವಂತರ ಸಾಲಿಗೆ ಸೇರಿಸೋದ್ರಲ್ಲಿ ಯಾವುದೇ ತಪ್ಪಿಲ್ಲ.
ಆದರೆ 5 ವರ್ಷ ವಯಸ್ಸಿನ ಪ್ರೇಶಾ ಖೇಮನಿ, ಬರೋಬ್ಬರಿ 150 ರಾಷ್ಟ್ರಗಳ ಧ್ವಜ, ರಾಜಧಾನಿಯ ಹೆಸರುಗಳನ್ನ ಪಟ್ ನೆ ಹೇಳಬಲ್ಲಳು. ಕೇವಲ ನಾಲ್ಕು ನಿಮಿಷ 17 ಸೆಕೆಂಡ್ಗಳಲ್ಲಿ 150 ರಾಷ್ಟ್ರಗಳ ಧ್ವಜಗಳನ್ನ ಗುರುತಿಸಿ ಅವುಗಳ ರಾಜಧಾನಿಯನ್ನ ಹೇಳುವ ಮೂಲಕ ಈ ಪುಟ್ಟ ಪೋರಿ ವಿಶ್ವ ದಾಖಲೆ ಮಾಡಿದ್ದಾಳೆ.
ವಿಶ್ವ ದಾಖಲೆಯ ಭಾರತದ ಪುಸ್ತಕದಲ್ಲಿ ತನ್ನ ಹೆಸರನ್ನ ನಮೂದಿಸಿದ ಅತ್ಯಂತ ಚಿಕ್ಕ ವಯಸ್ಸಿನ ಸಾಧಕಿ ಎಂಬ ಹೆಗ್ಗಳಿಕೆಗೂ ಪ್ರೇಶಾ ಪಾತ್ರಳಾಗಿದ್ದಾಳೆ. ಇನ್ನು ಮಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಆಕೆಯ ತಂದೆ, ನಮ್ಮ ಮಗಳು ಲಾಕ್ಡೌನ್ ಸಮಯದಲ್ಲಿ 150 ರಾಷ್ಟ್ರಗಳ ಧ್ವಜ ಹಾಗೂ ರಾಜಧಾನಿಗಳ ಬಗ್ಗೆ ತಿಳಿದುಕೊಂಡಳು ಅಂತಾ ಹೇಳಿದ್ದಾರೆ.
ಎಲ್ಲಾ ರಾಷ್ಟ್ರಗಳ ಕರೆನ್ಸಿ, ಭಾಷೆ , ಪ್ರಧಾನಿ ಹಾಗೂ ರಾಷ್ಟ್ರಪತಿಯ ಹೆಸರನ್ನ ನೆನಪಿಟ್ಟುಕೊಳ್ಳಲು ಪ್ರೇಶಾ ತಯಾರಿ ನಡೆಸುತ್ತಿದ್ದಾಳಂತೆ.