ಕೆಲ ಮಹಿಳೆಯರು ಸ್ವಾಭಾವಿಕವಾಗಿ ಗರ್ಭಧಾರಣೆ ಧರಿಸಲು ಕಷ್ಟಪಡ್ತಾರೆ. ಎಲ್ಲ ವೈದ್ಯಕೀಯ ಪರೀಕ್ಷೆ ನಡೆಸಿ, ವರದಿ ಸಾಮಾನ್ಯವಾಗಿದ್ದರೂ ನೈಸರ್ಗಿಕವಾಗಿ ಗರ್ಭಧಾರಣೆ ಸಾಧ್ಯವಾಗುವುದಿಲ್ಲ. ಇದಕ್ಕೆ ಪುರುಷರ ಬಂಜೆತನ ಮುಖ್ಯ ಕಾರಣ. ಪುರುಷರ ವೀರ್ಯದ ಗುಣಮಟ್ಟ ಹಾಗೂ ಪ್ರಮಾಣ ಗರ್ಭಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಮಹಿಳೆಯ ಗರ್ಭಧಾರಣೆಯಲ್ಲಿ ಪುರುಷರ ಫಲವತ್ತತೆ ನಿರ್ಣಾಯಕ ಪಾತ್ರ ವಹಿಸುತ್ತದೆ. Herring Sperm ವೀರ್ಯ ಕಡಿಮೆ ಇರುವುದು ಹಾಗೂ ಕಡಿಮೆ ಗುಣಮಟ್ಟದಲ್ಲಿದ್ದರೆ ಗರ್ಭಧಾರಣೆ ಸಾಧ್ಯತೆ ಶೇಕಡಾ 10ಕ್ಕಿಂತ ಕಡಿಮೆಯಿರುತ್ತದೆ. ಸಾಮಾನ್ಯವಾಗಿ ಪುರುಷರ ಬಂಜೆತನಕ್ಕೆ ಯಾವುದೇ ಲಕ್ಷಣ ಪ್ರಮುಖವಾಗಿರುವುದಿಲ್ಲ. ಶಿಶ್ನದ ಪರಾಕಾಷ್ಠೆ, ಸಂಭೋಗದ ವೇಳೆ ತೊಂದರೆ ಕಾಡುವುದಿಲ್ಲ. ಹಾಗೆ ಬರಿಗಣ್ಣಿನಲ್ಲಿ ವೀರ್ಯ ನೋಡಿದ್ರೆ ಸಮಸ್ಯೆ ಕಾಣಿಸುವುದಿಲ್ಲ. ವೈದ್ಯಕೀಯ ವಿಧಾನದ ಮೂಲಕ ಪರೀಕ್ಷೆ ಮಾಡಿದಾಗ ಮಾತ್ರ ವೀರ್ಯದ ಗುಣಮಟ್ಟ ಗೊತ್ತಾಗುತ್ತದೆ.
2015-2017 ರ ಮಧ್ಯೆ ನಡೆದ ಸಮೀಕ್ಷೆಯಲ್ಲಿ ಆಶ್ಚರ್ಯದ ಸಂಗತಿ ಹೊರಬಿದ್ದಿದೆ. ಐವಿಎಫ್ ಮೂಲಕ ಮಕ್ಕಳನ್ನು ಪಡೆಯಲು ಬರುವ ದಂಪತಿಯಲ್ಲಿ ಶೇಕಡಾ 40 ರಷ್ಟು ಪುರುಷರೇ ಸಮಸ್ಯೆ ಹೊಂದಿದ್ದರಂತೆ. ಐದು ಪುರುಷರಲ್ಲಿ ಒಬ್ಬರಿಗೆ ಬಂಜೆತನ ಕಾಡಿತ್ತಂತೆ. ಇಂಥ ಪುರುಷರು ಭಯಪಡುವ ಅಗತ್ಯವಿಲ್ಲ. ಇದಕ್ಕೂ ಚಿಕಿತ್ಸೆ ಸಾಧ್ಯವೆಂದು ವೈದ್ಯರು ಹೇಳಿದ್ದಾರೆ.