ಕಾಡಿನ ರಾಜ ಸಿಂಹದ ಶಕ್ತಿ ಹಾಗೂ ಚತುರತೆಯ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಹೀಗಾಗಿಯೇ ಎಂತೆಥವರೂ ಕೂಡ ಸಿಂಹದ ಘರ್ಜನೆಯ ಸದ್ದನ್ನ ಕೇಳಿದ್ರೆ ಸಾಕು ಹೆದರಿ ಕಂಗಾಲಾಗುತ್ತಾರೆ. ಆದರೆ ಸಿಂಹದ ಈ ಗಂಭೀರ ವ್ಯಕ್ತಿತ್ವವನ್ನೇ ನಾಚಿಸುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಸಿಂಹವೊಂದು ಓಡಾಡುತ್ತಿರುತ್ತೆ. ಈ ಸಮಯದಲ್ಲಿ ಬಾತುಕೋಳಿಯ ಮರಿಯೊಂದು ಸಿಂಹದ ಬಳಿಯೇ ಈಜಿಕೊಂಡು ಬರಿತ್ತೆ. ಇದನ್ನ ನೋಡಿ ಸಿಂಹವು ಆ ಪುಟ್ಟ ಮರಿಯ ಜೊತೆಗೆ ಆಟವಾಡಲು ಶುರುಮಾಡುತ್ತೆ. ಈ ವಿಡಿಯೋ ನೋಡಿದ್ರೆ ನಿಮಗೂ ಸಿಂಹ ಆ ಬಾತುಕೋಳಿಯ ಮರಿಯನ್ನ ಪ್ರೀತಿ ಮಾಡ್ತಿದೆ ಅನ್ನೋದು ತಿಳಿಯುತ್ತೆ.
ಈ ವಿಡಿಯೋವನ್ನ ಟ್ವಿಟರ್ನಲ್ಲಿ ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.