
ಕೊಂಕಣಾ ಕೆಲ ದಿನಗಳ ಹಿಂದಷ್ಟೇ ಸೀರೆಯುಟ್ಟ ಫೋಟೋಗಳನ್ನ ಪೋಸ್ಟ್ ಮಾಡಿದ್ದು ಇದಕ್ಕೆ ನಿಮ್ಮ ಬಳಿ ಸೀರೆಗೆ ಮ್ಯಾಚಿಂಗ್ ಬ್ಲೌಸ್ ಇಲ್ಲದೇ ಇದ್ದಾಗ ಎಂದು ಶೀರ್ಷಿಕೆ ನೀಡಿದ್ದರು. ಒಂದು ಸಣ್ಣ ಟ್ರಿಕ್ ಯೂಸ್ ಮಾಡಿ ಈಕೆ ಆ ಸೀರೆಯನ್ನ ಎಷ್ಟು ಚಂದವಾಗಿ ಉಟ್ಟುಕೊಂಡಿದ್ದರು ಅನ್ನೋದಕ್ಕೆ ಉತ್ತರ ಈ ಫೋಟೋದಲ್ಲಿದೆ ನೋಡಿ.
ಆಕೆ ಬ್ಲೌಸ್ ಬದಲಿಗೆ ಸೀರೆಗೆ ಹೊಂದುವಂತ ಬಣ್ಣದ ಲಿನೆನ್ ಶರ್ಟ್ನ್ನು ಧರಿಸಿದ್ದರು. ಈ ಮೂಲಕ ಸೀರೆಗೆ ಇಂಡೋ ಫ್ಯೂಶನ್ ಟಚ್ ನೀಡಿದ್ದಾರೆ. ಈಕೆಯ ಪೋಸ್ಟ್ ನೋಡಿದ ಫಾಲೋವರ್ಸ್ ಪ್ಲಾನ್ ಅಂದ್ರೆ ಇದಪ್ಪ ಎಂದಿದ್ದಾರೆ.
