ಮುತ್ತು ಪ್ರೀತಿಯ ಸಂಕೇತ. ಒಂದು ಮುತ್ತಿಗೆ ದೂರವಾದ ಸಂಬಂಧವನ್ನು ಹತ್ತಿರಕ್ಕೆಳೆಯುವ ಶಕ್ತಿಯಿದೆ. ಅದೇ ಮುತ್ತು ಸಂಗಾತಿಯನ್ನು ದೂರ ಕೂಡ ಮಾಡಬಹುದು. ಮುತ್ತು ಕೊಡಲು ಬಂದಾಗ ಸಂಗಾತಿ ದೂರ ಓಡಲು ನಾನಾ ಕಾರಣಗಳಿವೆ.
ವ್ಯಕ್ತಿ ಬಾಯಿಂದ ದುರ್ವಾಸನೆ ಬರ್ತಿದ್ದರೆ ಆತನಿಗೆ ಮುತ್ತಿಡುವುದಿರಲಿ ಮಾತನಾಡಲೂ ಬಯಸುವುದಿಲ್ಲ. ಕೆಲವೊಮ್ಮೆ ವ್ಯಕ್ತಿಗೆ ತನ್ನ ಬಾಯಿಂದ ದುರ್ವಾಸನೆ ಬರ್ತಿದೆ ಎಂಬುದೇ ತಿಳಿದಿರುವುದಿಲ್ಲ. ಮೊದಲ ಮುತ್ತು ಕೊನೆ ಮುತ್ತಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮುತ್ತು ಕೊಡುವ ಮುನ್ನ ಚೂಯಿಂಗ್ ಗಮ್ ಜಗಿಯಿರಿ ಇಲ್ಲವೆ ಮೌತ್ ವಾಶ್ ನಿಂದ ಬಾಯಿಯನ್ನು ಸ್ವಚ್ಛಗೊಳಿಸಿಕೊಳ್ಳಿ.
ಮೊದಲ ಮುತ್ತು ಎಲ್ಲರಿಗೂ ವಿಶೇಷವಾದದ್ದು ನಿಜ. ಹಾಗಂತ ಅತ್ಯುತ್ಸಾಹ ತೋರಿ ಯಡವಟ್ಟು ಮಾಡಿಕೊಳ್ಳಬೇಡಿ. ನಿಮ್ಮ ಮೇಲೆ ಹಿಡಿತವಿರಲಿ. ನಿಯಂತ್ರಣ ತಪ್ಪಿ ನಡೆದುಕೊಂಡಲ್ಲಿ ನಿಮ್ಮ ಸಂಗಾತಿಗೆ ನಿಮ್ಮ ಮುತ್ತು ಕಿರಿಕಿರಿಯುಂಟು ಮಾಡಬಹುದು ನೆನಪಿರಲಿ.
ಮುತ್ತು ಕೊಡುವ ವೇಳೆ ಕೈಗಳು ಎಲ್ಲಿರಬೇಕು? ಹೊಸಬರನ್ನು ಕಾಡುವ ಪ್ರಶ್ನೆ ಇದು. ನಿಮ್ಮ ಸಂಗಾತಿಯನ್ನು ಪ್ರೀತಿಯಿಂದ ಹಿಡಿದುಕೊಳ್ಳಿ. ಸಂಗಾತಿ ಕುತ್ತಿಗೆಯನ್ನು ಅಥವಾ ಕೈಯನ್ನು ಪ್ರೀತಿಯಿಂದ ಹಿಡಿದು ಅಲ್ಲಿಯೂ ನೀವು ನಿಮ್ಮ ಭಾವನೆಯನ್ನು ವ್ಯಕ್ತಪಡಿಸಬಹುದು. ಸಂಗಾತಿಗೆ ನೋವಾಗುವಂತೆ ಕತ್ತನ್ನು ಹಿಡಿದುಕೊಂಡು ಅವರ ಕೋಪಕ್ಕೆ ತುತ್ತಾಗಬೇಡಿ.
ಮುತ್ತಿಡುವ ವೇಳೆ ಹಲ್ಲುಗಳು ತಾಗುವುದು ಇಲ್ಲವೆ ತುಟಿಗಳ ಮೇಲೆ ಸಣ್ಣ ಗಾಯಗಳಾದ್ರೆ ಏನು ಮಾಡುವುದು? ಕೆಲವರು ಇದನ್ನು ನಿರ್ಲಕ್ಷಿಸ್ತಾರೆ. ಮತ್ತೆ ಕೆಲವರು ಇದನ್ನೇ ಗಂಭೀರವಾಗಿ ಪರಿಗಣಿಸಿ ಜಗಳಕ್ಕಿಳಿಯುತ್ತಾರೆ. ಹಾಗಾಗಿ ಮುತ್ತಿನ ವೇಳೆ ತಪ್ಪಾಗದಂತೆ ನೋಡಿಕೊಳ್ಳಿ.