ವಯಸ್ಸಾದಂತೆ ದಂಪತಿ ಭಾವನಾತ್ಮಕವಾಗಿ ಹತ್ತಿರವಾಗ್ತಾರೆ. ಶಾರೀರಿಕವಾಗಿ ದೂರವಾಗ್ತಾರೆ. ಶಾರೀರಿಕ ಸಂಬಂಧ ಬೆಳೆಸುವುದು ಕಡಿಮೆಯಾಗುತ್ತದೆ. ಇತ್ತೀಚಿಗೆ ನಡೆದ ಅಧ್ಯಯನವೊಂದು ವಯಸ್ಸಾದ ನಂತ್ರವೂ ಶಾರೀರಿಕ ಸಂಬಂಧ ಬೆಳೆಸುವುದನ್ನು ಮುಂದುವರೆಸಿದ್ರೆ ಏನೆಲ್ಲ ಲಾಭ ಎಂಬುದನ್ನು ಹೇಳಿದೆ.
ಅಧ್ಯಯನದ ಪ್ರಕಾರ ವಾರದಲ್ಲಿ ಕನಿಷ್ಠ ಒಂದು ಬಾರಿ ಶಾರೀರಿಕ ಸಂಬಂಧ ಬೆಳೆಸುವ ವಯಸ್ಕ ದಂಪತಿ ಮೆದುಳು ಆರೋಗ್ಯವಾಗಿರುತ್ತದೆಯಂತೆ. 50-83 ವರ್ಷ ವಯಸ್ಸಿನವರು ಅಧ್ಯಯನದಲ್ಲಿ ಪಾಲ್ಗೊಂಡಿದ್ದರು.
ಅಧ್ಯಯನದಲ್ಲಿ ಪಾಲ್ಗೊಂಡಿದ್ದವರಿಗೆ 12 ತಿಂಗಳುಗಳ ಕಾಲ ಪ್ರಶ್ನೆ ಕೇಳಲಾಗಿದೆ. ಸಂಬಂಧ ಬೆಳೆಸದವರಿಗಿಂತ ಸಂಬಂಧ ಬೆಳೆಸಿದವರು ಹೆಚ್ಚು ಸರಿಯಾದ ಉತ್ತರ ನೀಡಿದ್ದಾರೆ. ಹೆಚ್ಚು ಲೈಂಗಿಕ ಕ್ರಿಯೆ ಮಾಡಿದವರ ಪ್ರದರ್ಶನ ಮತ್ತೂ ಉತ್ತಮವಾಗಿತ್ತು.
ವಯಸ್ಸಾಗ್ತಿದ್ದಂತೆ ಮರೆವಿನ ರೋಗ ಕಾಡಲು ಶುರುವಾಗುತ್ತದೆ. ಒಂದೇ ಕಡೆ ಬಹಳ ಸಮಯ ಗಮನ ನೀಡಲು ಸಾಧ್ಯವಾಗುವುದಿಲ್ಲ. ಆದ್ರೆ 50ರ ನಂತ್ರವೂ ಸಂಬಂಧ ಬೆಳೆಸುವುದನ್ನು ಮುಂದುವರೆಸಿದ್ರೆ ನೆನಪಿನ ಶಕ್ತಿ ಕಡಿಮೆಯಾಗುವುದಿಲ್ಲ ಜೊತೆಗೆ ಗಮನ ನಿಶ್ಚಲವಾಗಿರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.