ಬೆಳಗಿನ ಸೆಕ್ಸ್ ಬಗ್ಗೆ ಸಮೀಕ್ಷೆಯೊಂದು ಅಚ್ಚರಿ ಸಂಗತಿಯನ್ನು ಹೊರ ಹಾಕಿದೆ. ಬೆಳಗಿನ ಸೆಕ್ಸ್ ಬಗ್ಗೆ ಜನರಂದುಕೊಂಡಿದ್ದೆಲ್ಲ ಸತ್ಯವಲ್ಲ. ಬಹುತೇಕರು ಮಾರ್ನಿಂಗ್ ಸೆಕ್ಸ್ ನಿಂದ ದೂರವಿರ್ತಾರಂತೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ.
ಆನ್ಲೈನ್ ಪೋರ್ಟಲ್ ಒಂದು ಮಾರ್ನಿಂಗ್ ಸೆಕ್ಸ್ ಬಗ್ಗೆ ಸರ್ವೆ ನಡೆಸಿತ್ತು. ಅದ್ರಲ್ಲಿ 1000 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅದ್ರಲ್ಲಿ ಮಾರ್ನಿಂಗ್ ಸೆಕ್ಸ್ ಇಷ್ಟಪಡ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಕೆಲವರು ಯಸ್ ಅಂದ್ರೆ ಮತ್ತೆ ಕೆಲವರು ಈವರೆಗೂ ಮಾಡಿಲ್ಲವೆಂದು ಉತ್ತರ ನೀಡಿದ್ದರು. ಉತ್ತರದ ಆಧಾರದ ಮೇಲೆ ಎರಡು ಗುಂಪುಗಳನ್ನು ಮಾಡಲಾಗಿತ್ತು.
ಶೇಕಡಾ 63 ರಷ್ಟು ಮಹಿಳೆಯರು ಮಾರ್ನಿಂಗ್ ಸೆಕ್ಸ್ ಮಾಡಿಲ್ಲವೆಂದ್ರು. ಶೇಕಡಾ 37 ಪುರುಷರು ಕೂಡ ಮಾರ್ನಿಂಗ್ ಸೆಕ್ಸ್ ಮಾಡಿಲ್ಲವೆಂದು ಉತ್ತರ ನೀಡಿದ್ದರು. ಮಾರ್ನಿಂಗ್ ಸೆಕ್ಸ್ ನಿಂದ ದೂರವಿರಲು ಕಾರಣವೇನು ಎಂಬುದನ್ನೂ ಸಮೀಕ್ಷೆಯಲ್ಲಿ ಮಹಿಳೆಯರು ಹೇಳಿದ್ದಾರೆ.
ಶೇಕಡಾ 50.7 ರಷ್ಟು ಮಹಿಳೆಯರ ಪ್ರಕಾರ, ಸೆಕ್ಸ್ ಗೆ ಮೂಡಿರೋದಿಲ್ಲ. ಈ ಕಾರಣಕ್ಕೆ ಮಾರ್ನಿಂಗ್ ಸೆಕ್ಸ್ ನಿಂದ ದೂರವಿರ್ತೇವೆಂದು ಮಹಿಳೆಯರು ಹೇಳಿದ್ದಾರೆ. ಶೇಕಡಾ 35.9 ಮಹಿಳೆಯರಿಗೆ ಸಮಯದ ಅಭಾವವಾದ್ರೆ ಶೇಕಡಾ 32.9 ರಷ್ಟು ಮಹಿಳೆಯರಿಗೆ ಬೆಳಿಗ್ಗೆ ಶಕ್ತಿಯಿರೋದಿಲ್ಲವಂತೆ.
ಇನ್ನು ಶೇಕಡಾ 51 ರಷ್ಟು ಪುರುಷರು ಪ್ರತಿದಿನ ಬೆಳಿಗ್ಗೆ ಸಂಬಂಧ ಬೆಳೆಸುವುದಾಗಿ ಹೇಳಿದ್ರೆ ಶೇಕಡಾ 20 ರಷ್ಟು ಮಹಿಳೆಯರು ಇದಕ್ಕೆ ವೋಟ್ ಹಾಕಿದ್ದಾರೆ.