ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಗಣೇಶನ ಹಬ್ಬವನ್ನು ಆಚರಣೆ ಮಾಡುವ ವಿಚಾರವಾಗಿ ಆಗಾಗ ಸಾಕಷ್ಟು ಮಾತುಗಳನ್ನು ಕೇಳುತ್ತಲೇ ಬರುತ್ತಿದ್ದೇವೆ.
ಇಂದೋರ್‌ನ ಲೋಕ ಸಂಸ್ಕೃತಿ ಮಂಚ್ ಈ ಬಾರಿ ಗಣೇಶ ಚತುರ್ಥಿಗೆಂದು ವಿಘ್ನೇಶ್ವರನ ಮೂರ್ತಿಗಳನ್ನು ಸ್ವಾಭಾವಿಕ ವಸ್ತುಗಳಿಂದಲೇ ಮಾಡಲು ನಿರ್ಧರಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಇತ್ತೀಚಿನ ’ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮಣ್ಣು ಹಾಗೂ ಸಗಣಿಯ ಮಹತ್ವದ ಮಾತುಗಳಿಂದ ಭಾರೀ ಪ್ರೇರಿತರಾಗಿದ್ದಾರೆ ಈ ಸಂಘಟನೆಯ ಮಂದಿ.
ಸುಮಾರು 300 ಮಹಿಳೆಯರು ಈ ಮೂರ್ತಿಗಳನ್ನು ತಯಾರಿಸಲು ತರಬೇತಿ ಪಡೆದುಕೊಂಡಿದ್ದು, ಇವರಿಗೆ ಎಲ್ಲಾ ಕಚ್ಛಾ ವಸ್ತುಗಳನ್ನು ಪೂರೈಕೆ ಮಾಡಲಾಗಿದ್ದು, ಇವರು ತಯಾರಿಸುವ ಮೂರ್ತಿಗಳನ್ನು ಮಂಚ್‌ನ ಸದಸ್ಯರು ಖರೀದಿ ಮಾಡುತ್ತಾರೆ.
ಕೊರೋನಾ ಸಾಂಕ್ರಮಿಕದ ವಿಚಾರವಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ, ’ಕೊರೋನಾ ಗಣೇಶ’, ’ಮಾಸ್ಕ್‌ಧಾರಿ ಗಣೇಶ’, ಹಾಗೂ ಸ್ವಾತಂತ್ರ‍್ಯ ದಿನಾಚರಣೆಯ ಸ್ಮರಣಾರ್ಥ ’ತ್ರಿವರ್ಣ ಗಣೇಶ’ ಮೂರ್ತಿಗಳನ್ನು ರಚಿಸಲಾಗಿದೆ.