alex Certify ಪತಿಯಿಂದ ಪತ್ನಿ ಮುಚ್ಚಿಡುವುದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯಿಂದ ಪತ್ನಿ ಮುಚ್ಚಿಡುವುದೇನು ಗೊತ್ತಾ…?

ಪತಿ-ಪತ್ನಿ ಉತ್ತಮ ಸ್ನೇಹಿತರು. ಪರಸ್ಪರ ಎಲ್ಲವನ್ನು ಹೇಳಿಕೊಂಡಾಗ ಸಂಬಂಧ ಇನ್ನಷ್ಟು ಗಟ್ಟಿಯಾಗಲು ಸಾಧ್ಯ. ಪತಿ-ಪತ್ನಿ ಪರಸ್ಪರ ತೆರೆದ ಪುಸ್ತಕದಂತಿರಬೇಕು ಅಂತಾ ಹೇಳ್ತಾರೆ. ಹೆಣ್ಣಾದವಳಿಗೆ ಗುಟ್ಟು ಮುಚ್ಚಿಡಲು ಸಾಧ್ಯವಿಲ್ಲ ಎಂಬ ಮಾತೂ ಇದೆ. ಆದ್ರೆ ಕೆಲ ವಿಷಯಗಳನ್ನು ಪತ್ನಿಯಾದವಳು ತನ್ನ ಗಂಡನ ಬಳಿ ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ. ತನ್ನಲ್ಲೇ ವಿಷಯವನ್ನು ಮುಚ್ಚಿಟ್ಟುಕೊಳ್ತಾಳೆ ಎಂಬುದು ನಿಮಗೆ ಗೊತ್ತಾ..?

ಸಂಬಂಧದ ಒತ್ತಡ: ಮಕ್ಕಳು ಅಥವಾ ಪತಿಯ ಸಂಬಂಧದಲ್ಲಿ ಅನುಭವಿಸುವ ಒತ್ತಡ ಹಾಗೂ ತೊಡಕುಗಳ ಬಗ್ಗೆ ಬೇರೆಯವರಿಂದ ಸಲಹೆ ಪಡೆಯಲು ಇಷ್ಟ ಪಡುತ್ತಾಳೆ. ಆದ್ರೆ ಪತಿಗೆ ಈ ವಿಷಯ ಗೊತ್ತಾಗದಂತೆ ನೋಡಿಕೊಳ್ಳುತ್ತಾಳೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಯ ಬಗ್ಗೆಯೂ ಪತ್ನಿ ಮುಕ್ತವಾಗಿ ಪತಿಯ ಜೊತೆ ಮಾತನಾಡುವುದಿಲ್ಲ.

ಆರೋಗ್ಯ ಸಮಸ್ಯೆ: ಆರೋಗ್ಯದಲ್ಲಿ ಏರುಪೇರಾದ್ರೆ ಪತ್ನಿಯಾದವಳು ಪತಿಗೆ ಈ ಬಗ್ಗೆ ಹೇಳುವುದಿಲ್ಲ. ಆರೋಗ್ಯದ ವಿಚಾರವನ್ನು ಪತಿಗೆ ಹೇಳಲು ಹೆದರುವುದಲ್ಲದೇ, ಸಾಧ್ಯವಾದರೆ ಒಬ್ಬಳೇ ವೈದ್ಯರ ಬಳಿ ಹೋಗಿ ಸಲಹೆ ಪಡೆದು ಬರುತ್ತಾಳೆ.

ವೃತ್ತಿಯ ಯಶಸ್ಸು: ವೃತ್ತಿಯ ಯಶಸ್ಸಿನ ಬಗ್ಗೆಯೂ ಪತ್ನಿಯಾದವಳು ಪತಿಯ ಮುಂದೆ ಹೇಳುವುದಿಲ್ಲ. ವೃತ್ತಿಯಲ್ಲಿ ಬಡ್ತಿ ಪಡೆದರೆ ಈ ವಿಷಯವನ್ನು ಆದಷ್ಟು ಮುಚ್ಚಿಡಲು ಪ್ರಯತ್ನಿಸುತ್ತಾಳೆ. ಪತಿ-ಪತ್ನಿ ನಡುವೆ ದುಡಿಮೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದರೆ ಎಂಬ ಆತಂಕ ಅವಳಲ್ಲಿರುತ್ತದೆ.

ಉಳಿತಾಯದ ವಿಷಯ: ಪತಿ ಕೊಟ್ಟ ಹಣದಲ್ಲಿಯೇ ಅಲ್ಪ ಸ್ವಲ್ಪ ಉಳಿಸುವ ಮಹಿಳೆಯರಿದ್ದಾರೆ. ಆದ್ರೆ ಈ ವಿಷಯವನ್ನು ಅವರು ಗಂಡನ ಮುಂದೆ ಹೇಳಲು ಇಷ್ಟಪಡುವುದಿಲ್ಲ. ಆಪತ್ ಕಾಲದಲ್ಲಿ ಉಪಯೋಗಕ್ಕೆ ಬರಬಹುದೆಂದು ಇದನ್ನು ಸಂಗ್ರಹಿಸಿಟ್ಟಿರುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...