ರೋಗ ಬಂದಾಗ ಚಿಕಿತ್ಸೆ ಪಡೆಯಲು ಹಲವರು ಹೆಲ್ತ್ ಇನ್ಶೂರೆನ್ಸ್ ಮಾಡಿಸಿರುತ್ತಾರೆ. ಅದರಲ್ಲಿ ಹೆಚ್ಚಿನ ಪ್ರಯೋಜನ ಸಿಗುವಂಥ ಪಾಲಿಸಿ ಆಯ್ಕೆ ಹೇಗೆ ಎಂಬ ಪ್ರಶ್ನೆ ಹಲವರಲ್ಲಿರಬಹುದು.
ಅಂಥವರಿಗಾಗಿ ಇಲ್ಲಿ ಕೆಲವು ಸಲಹೆಗಳಿವೆ. ಪಾಲಿಸಿ ಆಯ್ಕೆ ಮಾಡುವಾಗ ಇವುಗಳತ್ತ ಗಮನ ಹರಿಸಿದರೆ ನಿಮಗೆ ಅನುಕೂಲ ಆಗಲಿದೆ.
ಪಾಲಿಸಿ ಆಯ್ಕೆ ಮಾಡುವಾಗ ಚಿಕಿತ್ಸೆ ಪೂರ್ವ ಮತ್ತು ನಂತರದ ಖರ್ಚುಗಳು ಕವರ್ ಆಗುವ ಪಾಲಿಸಿ ಆಯ್ಕೆ ಮಾಡಿಕೊಳ್ಳಿ. ಚಿಕಿತ್ಸೆಗೆ ಗರಿಷ್ಠ ಷೇರು ವಹಿಸಿಕೊಳ್ಳುವ ಕಂಪನಿಗಳನ್ನೇ ಆಯ್ಕೆ ಮಾಡಿಕೊಳ್ಳಿ.
ಪಾಲಿಸಿ ಪ್ರಕಾರ ಆಸ್ಪತ್ರೆ ವಾರ್ಡ್ ಕುರಿತ ಖರ್ಚಿನ ಕಂಡೀಷನ್ ತಿಳಿದುಕೊಳ್ಳಿ. ಒಂದು ವರ್ಷದಲ್ಲಿ ಇನ್ಶೂರೆನ್ಸ್ ಕ್ಲೇಮ್ ಮಾಡಿಕೊಳ್ಳದಿದ್ದರೆ ಆ ವರ್ಷದ ನಂತರದ ವರ್ಷಕ್ಕೆ ಎಷ್ಟು ಬೋನಸ್ ಸಿಗುತ್ತದೆ ಎಂದು ತಿಳಿದು ಹೆಚ್ಚು ಬೋನಸ್ ನೀಡುವ ಪಾಲಿಸಿ ಅಥವಾ ಕಂಪನಿ ಆರಿಸಿಕೊಳ್ಳಿ. ಚಿಕಿತ್ಸೆ ಜೊತೆಗೆ ಹೆಲ್ತ್ ಚೆಕಪ್ ಇರುವ ಪಾಲಿಸಿಯನ್ನು ಆರಿಸಿಕೊಂಡರೆ ಕಾಯಿಲೆಗಳು ಮುಂಚಿತವಾಗಿ ಉಚಿತವಾಗಿ ಪತ್ತೆ ಆದಂತಾಗುತ್ತವೆ.