
ಮನುಷ್ಯನಿಗೆ ನಿದ್ದೆ ಬೇಕೇ ಬೇಕು. ಕೆಲವರು 10-12 ತಾಸು ಮಲಗಿದರೆ ಮತ್ತೆ ಕೆಲವರು 2-3 ಗಂಟೆ ಮಾತ್ರ ನಿದ್ದೆ ಮಾಡ್ತಾರೆ. ನಮ್ಮ ದೇಹಕ್ಕೆ ಎಷ್ಟು ನಿದ್ದೆ ಬೇಕು, ನಿದ್ದೆ ಯಾವ ಪರಿಣಾಮ ಬೀರುತ್ತೆ ಎಂಬ ಗೊಂದಲ ಎಲ್ಲರಲ್ಲೂ ಇದೆ.
ಅಮೆರಿಕಾದ ನ್ಯಾಷನಲ್ ಸ್ಲೀಪ್ ಫೌಂಡೇಶನ್ ಎಷ್ಟು ವಯಸ್ಸಿನವರು ಎಷ್ಟು ತಾಸು ನಿದ್ದೆ ಮಾಡಬೇಕೆಂಬುದನ್ನು ಹೇಳಿದೆ. ಅದರ ಪ್ರಕಾರ, ಹುಟ್ಟಿದ ಮಗುವಿಗೆ (ಮೂರು ತಿಂಗಳವರೆಗೆ) 14 ರಿಂದ 17 ತಾಸು ನಿದ್ದೆಯ ಅವಶ್ಯಕತೆ ಇರುತ್ತದೆ. 11 ತಿಂಗಳವರೆಗಿನ ಮಗುವಿಗೆ 12-15 ಗಂಟೆ ನಿದ್ದೆ ಅವಶ್ಯಕ.
ಹದಿಹರೆಯದವರು (14 -17 ವರ್ಷದವರು) 10 ತಾಸು ನಿದ್ದೆ ಮಾಡಬೇಕು. ವಯಸ್ಕರು ಕಡಿಮೆ ಎಂದರೂ 8 ತಾಸುಗಳ ಕಾಲ ನಿದ್ದೆ ಮಾಡುವ ಅವಶ್ಯಕತೆ ಇದೆಯಂತೆ.
ಶಾಲೆಗೆ ಹೋಗುವ (6-13 ವಯಸ್ಸು) ಮಕ್ಕಳು 9 ತಾಸಿಗಿಂತ ಕಡಿಮೆ ನಿದ್ದೆ ಮಾಡಬಾರದು. 11 ತಾಸುಗಳ ನಿದ್ದೆ ಅವರಿಗೆ ಅವಶ್ಯಕ ಎಂದು ಹೇಳಿದೆ.