ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಕೋಪ, ಸಿಟ್ಟು ಯಾವಾಗಲೂ ಅವರ ಮೂಗಿನ ತುದಿಯಲ್ಲೇ ಇರುತ್ತದೆ. ಮತ್ತೆ ಕೆಲವರದಂತೂ ಒಳ್ಳೆಯ ಮನಸ್ಸು. ಅವರು ಎಲ್ಲವನ್ನು ಸಮಾಧಾನಚಿತ್ತದಿಂದ ಸ್ವೀಕರಿಸುತ್ತಾರೆ. ಅವರ ವ್ಯವಧಾನಚಿತ್ತವಂತೂ ಗಂಭೀರವಾದುದು.
ನೀವೇ ಯೋಚಿಸಿ ನೋಡಿ, ಕೆಲವರು ಜಗಳವಾದ ನಂತರ ಕ್ಷಮೆಯನ್ನು ಕೇಳುತ್ತಾರೆ. ಇದರರ್ಥ ಅವರಿಗೆ ಬೇರೆ ಯಾರೂ ಸಿಗಲ್ಲ ಎಂದುಕೊಂಡಿರಾ? ಅಥವಾ ತಪ್ಪು ಅವರದೇ ಇರಬೇಕು ಎಂದು ಅರ್ಥವಲ್ಲ, ಬದಲಿಗೆ ಅವರು ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ ಎಂಬುದನ್ನು ತಿಳಿಯಿರಿ.
ಡ್ರೈ ಶಾಂಪುವಿಗೆ ಸಂಬಂಧಿಸಿದ ಈ ವಿಚಾರಗಳು ನಿಜವಲ್ಲ
ಕೆಲವರಂತೂ ನೀವು ಕರೆಯದೇ ಇದ್ದರೂ ಓಡಿಬಂದು ನಿಮಗೆ ಸಹಾಯ ಮಾಡುತ್ತಾರೆ ಎಂದರೆ ಅವರಿಗೆ ಬೇರೆ ಕೆಲಸವಿಲ್ಲ ಎಂದುಕೊಳ್ಳಬೇಡಿ, ಅಂತಹವರಿಗೆ ಮಾತ್ರ ನೋವಿನ ಬೆಲೆ ಹಾಗೂ ಮಾನವೀಯತೆಯ ಬೆಲೆ ತಿಳಿದಿರುತ್ತದೆ ಇದನ್ನು ನೀವು ಅರಿತಿರಬೇಕು.
ನೀವು ಕೇಳದೆ ಇದ್ದರೂ ನಿಮಗೆ ಕೆಲವರು ಪಾರ್ಟಿ ಕೊಟ್ಟು ಬಿಲ್ ಅನ್ನು ಯಾವಾಗಲೂ ಅವರೇ ಕೊಡುತ್ತಾರೆ ಎಂದರೆ ಅವರಲ್ಲಿ ಸಾಕಷ್ಟು ಹಣವಿದೆ ಎಂದು ಭಾವಿಸಬೇಡಿ, ಬದಲಿಗೆ ಸ್ನೇಹ ಸಂಬಂಧಕ್ಕಿಂತ ಹಣ ಮುಖ್ಯವಲ್ಲ ಎಂಬುದನ್ನು ಅವರು ಅರಿತುಕೊಂಡಿರುತ್ತಾರೆ.
ಕೆಲವರು ನಿಮಗೆ ಯಾವಾಗಲೂ ಮೆಸೇಜ್, ಪೋನ್ ಮಾಡುತ್ತಿರುತ್ತಾರೆ ಎಂದರೆ ಅವರಿಗೆ ಮಾಡಲು ಬೇರೆ ಕೆಲಸ ಇಲ್ಲವೆಂದಲ್ಲ, ಅವರು ಎಷ್ಟೇ ಬ್ಯುಸಿಯಾಗಿದ್ದರೂ ನೀವು ಅವರ ಹೃದಯದಲ್ಲಿರುತ್ತೀರಿ. ಅಂತಹವರಿಗೆ ಅವರ ಸಮಯವನ್ನು ನೀಡಲು ಬಯಸುತ್ತಾರೆ ಎಂದು ತಿಳಿಯಿರಿ.
ಯಾರಾದರೂ ನೀವು ಮಾತನಾಡಲು ಸಿಕ್ಕರೆ ಸಾಕು ಎಂದು ನಿಮಗಾಗಿ ಗಂಟೆಗಟ್ಟಲೇ ಕಾಯಲು ಸಿದ್ಧವಾಗಿರುತ್ತಾರೆ ಎಂದರೆ ಅವರು ಮಾಡಲು ಕೆಲಸವಿಲ್ಲದೇ ಕುಳಿತಿದ್ದಾರೆ ಎಂದುಕೊಂಡಿರಾ? ಅವರ ದೃಷ್ಟಿಯಲ್ಲಿ ನಿಮ್ಮೊಂದಿಗೆ ಮಾತನಾಡುವುದಕ್ಕಿಂತ ಮಹತ್ವದ ಕೆಲಸ ಬೇರೆನೂ ಇಲ್ಲ ಎಂದು ಅರ್ಥ ಮಾಡಿಕೊಳ್ಳಿ. ಇಂತಹವರ ಬಗ್ಗೆ ಕಾಳಜಿ ವಹಿಸಿ, ನಿರ್ಲಕ್ಷ್ಯ ಮಾಡಬೇಡಿ.