ಲೈಂಗಿಕ ಸಂಬಂಧದ ಕುರಿತು ಭಾರತದಲ್ಲಿ ಇನ್ನೂ ಮಡಿವಂತಿಕೆ ಇದೆ. ಈ ಕುರಿತು ಮಾತನಾಡಿದರೆ ತಪ್ಪು ಎಂಬ ಭಾವನೆ ಇದೆ. ಆದರೆ ಇದು ಸಹಜ ನೈಸರ್ಗಿಕ ಕ್ರಿಯೆ. ಲೈಂಗಿಕ ಆಸಕ್ತಿ ಕೆರಳಿಸುವ ಉಪಾಯಗಳ ಕುರಿತ ಮಾಹಿತಿ ಇಲ್ಲಿದೆ.
ತಜ್ಞರ ಪ್ರಕಾರ, ಕೇಸರಿ ಸೇವನೆ ಮಹಿಳೆಯರ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆಯಂತೆ. ಕೇಸರಿಯನ್ನು ಬಿಸಿ ನೀರಿನಲ್ಲಿ 15 ನಿಮಿಷ ಕುದಿಸಿ ಕುಡಿದ್ರೆ ಹೆಚ್ಚು ಲಾಭದಾಯಕ ಎಂದು ತಜ್ಞರು ಹೇಳಿದ್ದಾರೆ.
ಬಾದಾಮಿ ಸುವಾಸನೆ ಕೂಡ ಮಹಿಳೆಯರಲ್ಲಿ ಕಾಮ ಪ್ರಚೋದನೆಯನ್ನು ಹೆಚ್ಚಿಸುತ್ತದೆಯಂತೆ. ಹಾಗಾಗಿ ಬಾದಾಮಿಯನ್ನು ಮಹಿಳೆಯರು ಅವಶ್ಯವಾಗಿ ಸೇವನೆ ಮಾಡಬೇಕು. ಇದ್ರ ಜೊತೆಗೆ ಕೋಣೆಯಲ್ಲಿ ಬಾದಾಮಿ ಸುವಾಸನೆಯ ಮೇಣದ ಬತ್ತಿಯನ್ನು ಹಚ್ಚಿಡುವುದು ಒಳ್ಳೆಯದು.
ಸಾಮಾನ್ಯವಾಗಿ ಪ್ರೇಮಿಗಳು ಪರಸ್ಪರ ಚಾಕೋಲೇಟನ್ನು ಉಡುಗೊರೆ ರೂಪದಲ್ಲಿ ನೀಡ್ತಾರೆ. ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಿಸಲು ಡಾರ್ಕ್ ಚಾಕೋಲೇಟ್ ಒಳ್ಳೆಯದು. ಇದ್ರಲ್ಲಿರುವ ಮೆಗ್ನೀಷಿಯಮ್, ಸ್ನಾಯುಗಳು ಹಾಗೂ ಒತ್ತಡವನ್ನು ಸಡಿಲಗೊಳಿಸುತ್ತದೆ. ಸಂತೋಷದ ಭಾವನೆಯನ್ನು ಹೆಚ್ಚಿಸುತ್ತದೆ.
ಬೆಳ್ಳುಳ್ಳಿ ಕೂಡ ಪ್ರೀತಿ ಹೆಚ್ಚಿಸುವ ಆಹಾರವಾಗಿದೆ. ಇದ್ರಲ್ಲಿರುವ ಅಲಿಸಿನ್ ರಕ್ತ ಸಂಚಾರವನ್ನು ಸುಲಭಗೊಳಿಸುತ್ತದೆ. ಅನ್ಯೋನ್ಯ ದಾಂಪತ್ಯ ಬಯಸುವವರು ಇದನ್ನು ಅವಶ್ಯವಾಗಿ ಸೇವನೆ ಮಾಡಬೇಕು.