ಇದ್ದಕ್ಕಿದ್ದ ಹಾಗೆ ಹುಡುಗಿ ಇಷ್ಟವಾಗಿ ಬಿಡ್ತಾಳೆ. ಆಕೆ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೆಂಬ ಬಯಕೆಯಾಗುತ್ತದೆ. ಆದ್ರೆ ಎಲ್ಲ ಹುಡುಗರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆ ಆಕೆ ಒಂಟಿನಾ? ಇಲ್ಲ ಎಂಗೇಜ್ ಆಗಿದ್ದಾಳಾ ಅನ್ನೋದು. ಇದನ್ನು ಆಕೆಯ ಬಳಿ ಹೇಗೆ ಕೇಳೋದು? ಹಾಗಂತ ಸುಮ್ಮನಿರೋದಕ್ಕೂ ಆಗೋದಿಲ್ಲ. ಈ ಗೊಂದಲ ನಿಮ್ಮನ್ನೂ ಕಾಡ್ತಿದ್ದರೆ ಚಿಂತೆ ಬಿಡಿ. ಆಕೆ ಸಿಂಗಲ್ಲಾ ಎನ್ನೋದನ್ನು ಸುಲಭವಾಗಿ ತಿಳಿದುಕೊಳ್ಳುವ ಉಪಾಯ ಹೇಳ್ತೇವೆ ಕೇಳಿ.
ಬಾಡಿ ಲಾಂಗ್ವೇಜ್ : ಪ್ರತಿಯೊಬ್ಬ ವ್ಯಕ್ತಿಯ ಬಾಡಿ ಲಾಂಗ್ವೇಜ್ ಅವರ ಬಗ್ಗೆ ಎಲ್ಲವನ್ನೂ ಹೇಳುತ್ತೆ. ಆದ್ರೆ ಅದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ನಿಮಗೆ ಬಾಡಿ ಲಾಂಗ್ವೇಜ್ ಅರ್ಥವಾದ್ರೆ ಆಕೆ ಸಿಂಗಲ್ಲಾ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಮುಖ ಲಕ್ಷಣ : ಬೇರೆ ಜೋಡಿಯ ಬಗ್ಗೆ ಮಾತನಾಡುವಾಗ ಆಕೆ ಅತೃಪ್ತಿ ಭಾವ ವ್ಯಕ್ತಪಡಿಸಿದ್ರೆ ಇಲ್ಲ ವಿಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ರೆ ಆಕೆ ಪ್ರೀತಿ ಹುಡುಕಾಟದಲ್ಲಿದ್ದಾಳೆಂದು ಅರ್ಥ.
ಆಕರ್ಷಣೆಯ ಕೇಂದ್ರಬಿಂದು ಈ ಪರಿಸರ ಸ್ನೇಹಿ ರೆಸ್ಟೋರೆಂಟ್
ಸ್ನೇಹಿತರಿಗೆ ಹೆಚ್ಚು ಸಮಯ : ನಿಮ್ಮ ಹುಡುಗಿ ಸದಾ ಗೆಳತಿಯ ಜೊತೆ ಕಾಣಿಸಿಕೊಳ್ತಿದ್ದರೆ ನಿಮ್ಮ ದಾರಿ ಸುಲಭ. ಸಿಂಗಲ್ ಆಗಿರುವ ಹುಡುಗಿಯರು ಸ್ನೇಹಿತರ ಜೊತೆ ಕಾಲ ಕಳೆಯುತ್ತಾರೆ.
ಬೇರೆ ಹುಡುಗರ ಜೊತೆ ಗೆಳೆತನ : ಯಾವ ಹುಡುಗಿ ಬೇರೆ ಹುಡುಗರ ಜೊತೆ ಸ್ನೇಹ ಬೆಳೆಸ್ತಾಳೋ ಆಕೆ ಸಿಂಗಲ್ ಎನ್ನೋದು ಗ್ಯಾರಂಟಿ.
ಮುಗುಳ್ನಗೆ : ನಿಮ್ಮ ಜೊತೆ ಮಾತನಾಡುವ ಹುಡುಗಿ ಕಣ್ಣಿನಲ್ಲೇ ನಕ್ಕರೆ ಆಕೆಗೂ ನಿಮ್ಮ ಮೇಲೆ ಇಷ್ಟವಿದೆಯೆಂದೇ ಅರ್ಥ.