
ಮಕ್ಕಳನ್ನು ತಂದೆ ಬೆಳೆಸುವ ವಿಧಾನವೇ ಬೇರೆ. ತಾಯಿ ಬೆಳೆಸುವ ವಿಧಾನವೇ ಬೇರೆ. ತಂದೆ ಜೊತೆ ಬೆಳೆದ ಮಕ್ಕಳು ಹೆಚ್ಚು ಬುದ್ದಿವಂತರಿರುತ್ತಾರೆಂಬ ಮಾತೊಂದಿದೆ. ಅದೇನೇ ಇರಲಿ, ಪ್ರತಿಯೊಂದು ಕೆಲಸದಲ್ಲೂ ಕೆಲ ತಂದೆಯಂದಿರು ಹೊಸತನ ಹುಡುಕುತ್ತಾರೆ. ಇದಕ್ಕೆ ಈಗ ವೈರಲ್ ಆಗಿರುವ ವಿಡಿಯೋ ಸಾಕ್ಷಿ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ತಂದೆ ಮಗಳಿಗೆ ಜುಟ್ಟು ಹಾಕ್ತಿದ್ದಾನೆ. ಈ ವೀಡಿಯೊ ವಿಶೇಷವೆಂದ್ರೆ ತಂದೆ ಕೇವಲ 5 ಸೆಕೆಂಡುಗಳಲ್ಲಿ ಮಗಳಿಗೆ ಜುಟ್ಟು ಹಾಕ್ತಾನೆ. ಇದು ಜನರಿಗೆ ಹೆಚ್ಚು ಇಷ್ಟವಾಗಿದೆ. ಟಿಕ್ ಟಾಕ್ ವೀಡಿಯೊದಲ್ಲಿ ತಂದೆ ತನ್ನ ಮಗಳಿಗೆ ಜುಟ್ಟು ಹಾಕಲು ವ್ಯಾಕ್ಯೂಮ್ ಕ್ಲೀನರ್ ಬಳಸಿದ್ದಾನೆ. ಕೇವಲ 5 ಸೆಕೆಂಡುಗಳಲ್ಲಿ ಜುಟ್ಟು ಹಾಕಿದ್ದಾನೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆ ಮೆನ್ ವಿಲ್ ಬಿ ಮೆನ್, ತಂದೆ + ಮಗಳು-ಎಂದೆಂದಿಗೂ ಬೆಸ್ಟೀಸ್ ಎಂದು ಬರೆದುಕೊಂಡಿದ್ದಾರೆ. ಫೆಬ್ರವರಿ 11ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಈವರೆಗೆ 7 ಸಾವಿರಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ.