alex Certify ನಿಜವಾದ ಪ್ರೀತಿ ಯಾವುದು….? ಪ್ರಶ್ನೆಗೆ ಇಲ್ಲಿದೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಜವಾದ ಪ್ರೀತಿ ಯಾವುದು….? ಪ್ರಶ್ನೆಗೆ ಇಲ್ಲಿದೆ ಉತ್ತರ

ಪ್ರೀತಿ ಒಂದು ಅನನ್ಯ ಭಾವನೆ. ಪರಿಪೂರ್ಣ ಬದುಕಿಗೆ ಪ್ರೀತಿ ಬೇಕು. ಮದುವೆಯಾದ ಅನೇಕ ದಂಪತಿಗೆ ಪ್ರೀತಿ ಸಿಗುವುದಿಲ್ಲ. ಮತ್ತೆ ಕೆಲವರು ಪ್ರೀತಿಗಾಗಿಯೇ ಬದುಕುತ್ತಾರೆ. ಮದುವೆಯಾಗಿ ಎಷ್ಟು ವರ್ಷ ಕಳೆದ್ರೂ ಅವರಿಬ್ಬರ ಮಧ್ಯೆ ಪ್ರೀತಿ ಕಡಿಮೆಯಾಗುವುದಿಲ್ಲ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಉತ್ತಮ ನಿದರ್ಶನ.

ವಿಡಿಯೋದಲ್ಲಿರುವ ವೃದ್ಧ ದಂಪತಿ ಪ್ರೀತಿ ಕಣ್ಣಲ್ಲಿ ನೀರು ತರಿಸುತ್ತದೆ. ದಂಪತಿ ಕೈ ಕೈ ಹಿಡಿದು ಸಮುದ್ರ ಕಿನಾರೆಯಲ್ಲಿ ಓಡಾಡೋದು ಮಾಮೂಲಿ. ಆದ್ರೆ ಈ ದಂಪತಿ ಸಮುದ್ರ ಕಿನಾರೆಯಲ್ಲಿ ವಿಭಿನ್ನವಾಗಿ ಎಂಜಾಯ್ ಮಾಡಿದ್ದಾರೆ. ಪತ್ನಿಗೆ ಸಮುದ್ರಕ್ಕೆ ಇಳಿಯಲು ಸಾಧ್ಯವಿಲ್ಲ. ಹಾಗಾಗಿ ಆಕೆಯನ್ನು ಗಾಲಿ ಖುರ್ಚಿ ಮೇಲೆ ಸಮುದ್ರ ಕಿನಾರೆಗೆ ತಂದಿರುವ ಪತಿ, ಮಗ್ ನಲ್ಲಿ ಆಕೆ ಮೇಲೆ ಸಮುದ್ರದ ನೀರು ಹಾಕ್ತಿದ್ದಾನೆ.

ಈ ಸುಂದರ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಹಂಚಿಕೊಂಡಿದ್ದಾರೆ. ನಿಜವಾದ ಪುರುಷ ಯಾವಾಗಲೂ ತನ್ನ ಸಂಗಾತಿಯನ್ನು ಗೌರವ, ಕಾಳಜಿಯಿಂದ ನೋಡಿಕೊಳ್ಳುತ್ತಾನೆಂದು ಶೀರ್ಷಿಕೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...