ಸೆಕ್ಸ್ ಜೀವನದ ಒಂದು ಭಾಗ. ಸುಖ ದಾಂಪತ್ಯಕ್ಕೆ ಅತ್ಯಗತ್ಯ. ಪ್ರತಿದಿನದ ಸೆಕ್ಸ್ ಆರೋಗ್ಯಕ್ಕೂ ಒಳ್ಳೆಯದು ಎಂದು ಅನೇಕ ಸಂಶೋಧನೆಗಳು ಹೇಳಿವೆ. ಇದಾಗ್ಯೂ ಕೆಲ ಸಂದರ್ಭಗಳಲ್ಲಿ ಸೆಕ್ಸ್ ನಿಂದ ದೂರವಿರುವುದು ಸಂಗಾತಿಗಳಿಗೆ ಒಳ್ಳೆಯದು ಎನ್ನುತ್ತಾರೆ ತಜ್ಞರು.
ತಜ್ಞರ ಪ್ರಕಾರ, ಖಾಸಗಿ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ ಅದು ಗುಣಮುಖವಾಗುವವರೆಗೆ ಸಂಗಾತಿಯಿಂದ ದೂರವಿರುವುದು ಒಳ್ಳೆಯದು. ಕಾಂಡೋಮ್ ಬಳಕೆಯಿಂದ ಸೋಂಕು ಹರಡುವುದಿಲ್ಲವೆಂದು ನಂಬಲಾಗಿದೆ. ಆದ್ರೆ ಈ ಮಾತನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಸೋಂಕಿರುವ ಸಂದರ್ಭದಲ್ಲಿ ಸಂಗಾತಿಯಿಂದ ದೂರ ಇರುವುದು ಇಬ್ಬರಿಗೂ ಒಳಿತು.
ತಲೆ ನೋವು ಅಥವಾ ದೇಹದ ಬೇರೆ ಭಾಗಗಳಲ್ಲಿ ನೋವಿದ್ದರೆ ಸೆಕ್ಸ್ ನಂತ್ರ ಅದು ಕಡಿಮೆಯಾಗುತ್ತದೆ. ಒತ್ತಡ ಕಡಿಮೆಯಾಗಿ ಮನಸ್ಸು ಉಲ್ಲಾಸಿತಗೊಳ್ಳುತ್ತದೆ ನಿಜ. ಆದ್ರೆ ಖಾಸಗಿ ಭಾಗದಲ್ಲಿ ಯಾವುದೇ ನೋವು, ತುರಿಕೆ, ಉರಿ ಕಾಣಿಸಿಕೊಳ್ಳುತ್ತಿದ್ದರೆ ಸೆಕ್ಸ್ ಒಳ್ಳೆಯದಲ್ಲ.
ಅಪರಿಚಿತ ವ್ಯಕ್ತಿಗಳ ಜೊತೆ ಡೇಟಿಂಗ್ ಅನೇಕರು ಇಷ್ಟಪಡ್ತಾರೆ. ಹಾಗಂತ ಅಪರಿಚಿತ ವ್ಯಕ್ತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವುದು ಯೋಗ್ಯವಲ್ಲ. ಅಪರಿಚಿತ ವ್ಯಕ್ತಿ ಸೆಕ್ಸ್ ಜೀವನದ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಇದು ನಿಮ್ಮನ್ನು ಗಂಭೀರ ಆರೋಗ್ಯ ಸಮಸ್ಯೆಗೆ ತಳ್ಳುವ ಸಾಧ್ಯತೆಯಿರುತ್ತದೆ.
ಬಹುತೇಕರಿಗೆ ಸಂಭೋಗದ ವೇಳೆ ಕಾಂಡೋಮ್ ಬೇಕೇಬೇಕು. ಸುರಕ್ಷಿತ ಸೆಕ್ಸ್ ಗಾಗಿ ಅವರು ಕಾಂಡೋಮ್ ಬಳಸ್ತಾರೆ. ಸಂಗಾತಿಗೆ ಸೆಕ್ಸ್ ಮೂಡಿದ್ದು, ಕಾಂಡೋಮ್ ಹತ್ತಿರವಿಲ್ಲವೆಂದಾದ್ರೆ ಸೆಕ್ಸ್ ನಿಂದ ದೂರವಿರುವುದು ಒಳ್ಳೆಯದು.
ಇಬ್ಬರಲ್ಲಿ ಒಬ್ಬರಿಗೆ ಸಂಭೋಗದಲ್ಲಿ ಆಸಕ್ತಿಯಿಲ್ಲವೆಂದಾದ್ರೆ ಅಂದು ಇಬ್ಬರೂ ದೂರವಿರುವುದು ಒಳ್ಳೆಯದು. ಒತ್ತಾಯದ ಸೆಕ್ಸ್ ಸಂತೋಷ, ನೆಮ್ಮದಿ ನೀಡುವ ಬದಲು ಕೋಪ, ಒತ್ತಡ ಹೆಚ್ಚಾಗಲು ಕಾರಣವಾಗುತ್ತದೆ. ಪರಸ್ಪರ ಒಪ್ಪಿಗೆ ಇದ್ದಾಗ ಮಾತ್ರ ಸೆಕ್ಸ್ ನಲ್ಲಿ ಕ್ಲೈಮ್ಯಾಕ್ಸ್ ತಲುಪಲು ಸಾಧ್ಯ.