ಪ್ರೀತಿ ಕುರುಡು ಅನ್ನೋ ಮಾತು ಕೇಳಿರುತ್ತೀರಾ, ಏಕೆಂದರೆ ಪ್ರೀತಿಯು ಜಾತಿ, ಮತ ಮತ್ತು ವಯಸ್ಸನ್ನು ಲೆಕ್ಕಿಸದೇ ಹುಟ್ಟುತ್ತದೆ. ಹಿಂದೆಲ್ಲಾ ಹುಡುಗನು ಹುಡುಗಿಗಿಂತ ಒಂದೆರಡು ವರ್ಷ ವಯಸ್ಸಿನಲ್ಲಿ ದೊಡ್ಡವನಾಗಿರಬೇಕೆಂಬ ನಂಬಿಕೆ ಇತ್ತು. ಆದರೆ ಸಮೀಕ್ಷೆಯ ಪ್ರಕಾರ ಹುಡುಗಿಯರು ತಮಗಿಂತ ಚಿಕ್ಕ ವಯಸ್ಸಿನ ಹುಡುಗರ ಜೊತೆ ಡೇಟಿಂಗ್ ಮಾಡಲು ಬಯಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಬಂದಿರುವ ಚಲನಚಿತ್ರಗಳ ಪ್ರಭಾವದಿಂದ ಉತ್ತೇಜನಗೊಂಡಿರಬಹುದು. ಇದಕ್ಕೆ ಪೂರಕವಾಗಿ ನಿಮಗಿಂತ ಚಿಕ್ಕ ವಯಸ್ಸಿನ ಹುಡುಗ/ಪುರುಷನ ಜೊತೆ ಡೇಟಿಂಗ್ ಮಾಡಿದರೆ ಅದರಿಂದಾಗುವ ಪ್ರಯೋಜನಕಾರಿ ಅಂಶಗಳಿವೆ. ನಿಮಗಿಂತ ದೊಡ್ಡ ವಯಸ್ಸಿನ ಪುರುಷರು ನಿಮ್ಮ ಚಿಕ್ಕಪುಟ್ಟ ಸಾಧನೆಗಳ ಬಗ್ಗೆ ಶ್ಲಾಘಿಸುವುದಿಲ್ಲ, ಅದೇ ಕಿರಿಯ ವಯಸ್ಸಿನವರು ನಿಮ್ಮ ಸಾಧನೆಗಳನ್ನು ಗುರುತಿಸಿ ಅದಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತಾರೆ.
ಅವರಲ್ಲಿರುವ ಸಣ್ಣ ನ್ಯೂನ್ಯತೆಗಳನ್ನು ನೀವು ಹೇಳಿದಲ್ಲಿ ತಕ್ಷಣ ಅದನ್ನು ಸರಿ ಮಾಡಿಕೊಳ್ಳಲು ಬಯಸುತ್ತಾರೆ ಮತ್ತು ಹೊಸದನ್ನು ಕಲಿಯಲು ಉತ್ತೇಜಿತರಾಗಿರುತ್ತಾರೆ. ಅದೇ ನೀವು ನಿಮಗಿಂತ ದೊಡ್ಡ ವಯಸ್ಸಿನವರಿಗೆ ಹೇಳಿದ್ದೇ ಆದಲ್ಲಿ ಅದನ್ನು ಒಪ್ಪಿಕೊಳ್ಳುವ ಮಾತೇ ಇಲ್ಲಾ. ಚಿಕ್ಕ ವಯಸ್ಸಿನ ಹುಡುಗರಲ್ಲಿ ವೈಜ್ಞಾನಿಕವಾಗಿ ಟೆಸ್ಟೋಸ್ಟೆರಾನ್ ಮಟ್ಟವು ವಯಸ್ಸಾದ ಪುರುಷರಿಗಿಂತ ಹೆಚ್ಚಿರುತ್ತದೆ. ಆದ್ದರಿಂದ ಇವರು ತಮ್ಮನ್ನು ತಾವು ಹೆಚ್ಚು ಸ್ಮಾರ್ಟೆಸ್ಟ್ ಎಂದು ಕರೆಸಿಕೊಳ್ಳಲು ಹಪಹಪಿಸುತ್ತಾರೆ.
ಕಿರಿಯ ವಯಸ್ಸಿನವರ ಜೊತೆ ಸ್ತ್ರೀಯರು ಲೈಂಗಿಕ ಆಸಕ್ತಿಗಳನ್ನು ಹಂಚಿಕೊಂಡಲ್ಲಿ ಅವರು ನಿಮಗೆ ತೃಪ್ತಿಯನ್ನು ನೀಡುವುದರ ಜೊತೆಗೆ ಅತ್ಯಂತ ಸುಖಕರ ಸಮಯವನ್ನು ನಿಮಗೆ ನೀಡುತ್ತಾರೆ. ನೀವು ನೀಡಿದ ಯಾವುದೇ ರೀತಿಯ ಸಲಹೆಗಳನ್ನು ಕೊಂಚವೂ ಅಹಂಕಾರ ತೋರದೆ ಪಾಲಿಸುತ್ತಾರೆ. ಹಾಗೆಯೇ ನೀವು ವಯಸ್ಸಿನಲ್ಲಿ ಹಿರಿಯರಾಗಿರುವುದರಿಂದ ನಿಮ್ಮಿಂದ ಸಲಹೆಗಳನ್ನು ಪಡೆಯಲು ಹಿಂಜರಿಯುವುದಿಲ್ಲ. ಹೀಗಾಗಿ ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಧ್ಯಯನ ಹೇಳಿದೆ.