ವೃತ್ತಿ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಕಠಿಣ ಪರಿಶ್ರಮದ ಜೊತೆಗೆ ಒಳ್ಳೆಯ ವೃತ್ತಿಪರ ವಾತಾವರಣವೂ ಇರಬೇಕಾದ್ದು ಅತ್ಯಗತ್ಯ. ಕೆಲಸ ಮಾಡುವ ಜಾಗ ಖುಷಿ ನೀಡುವ ಹಾಗಿದ್ದರೆ ಮಾತ್ರ ಗುರಿ ಸಾಧಿಸಲು ಸಾಧ್ಯ. ಕೆಲವೊಮ್ಮೆ ಅದನ್ನು ನಾವು ನಿರ್ಮಿಸಿಕೊಡಬೇಕಾಗುತ್ತದೆ.
ನಿಮ್ಮೊಂದಿಗೆ ಕೆಲಸ ಮಾಡುವ ನೌಕರರಿಗೆ ಮೌಲ್ಯಮಾಪನ ಮಾಡಲು ಸಹಾಯಮಾಡಿ.
ಆಫೀಸಿನಲ್ಲಿ ಧನಾತ್ಮಕ ವಾತಾವರಣ ನಿರ್ಮಾಣ ಮಾಡಿ.
ನೌಕರರು ಕೆಲಸದಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸಿ.
ಉತ್ತಮ ಆರೋಗ್ಯಕ್ಕೆ ಸಹಾಯಕ ‘ಡ್ರೈ ಫ್ರೂಟ್ಸ್’
ನೌಕರರಿಗೆ ಕೆಲಸ ಮಾಡಲು ಅವರದ್ದೇ ಆದ ಸ್ವಾತಂತ್ರ್ಯ ನೀಡಿ.
ನಿಮ್ಮ ನೌಕರರು ಉತ್ತಮವಾಗಿ ಕೆಲಸ ಮಾಡಿದಾಗ ಅವರನ್ನು ಉತ್ತೇಜಿಸಲು ಮರೆಯಬೇಡಿ.
ನೌಕರರಿಗೆ ಅಗತ್ಯವಿದ್ದಲ್ಲಿ ಹೆಚ್ ಆರ್ ಬಳಿ ಅಥವಾ ಉದ್ಯಮಿಯ ಬಳಿಯೇ ಹೇಳಿಕೊಳ್ಳುವಷ್ಟು ಸರಳ ವಾತಾವರಣವಿರಲಿ.
ನೌಕರರನ್ನು ಕೆಲಸ ಮಾಡುವಂತೆ ಪ್ರೇರೇಪಿಸಿ. ಇದರಿಂದ ಅವರ ಸಾಮರ್ಥ್ಯ ಬಲವರ್ಧನೆ ಮಾಡಿ.
ಅಗತ್ಯವಿದ್ದಾಗ ನೌಕರರ ಅಭಿಪ್ರಾಯಗಳನ್ನು, ಪ್ರತಿಕ್ರಿಯೆಗಳನ್ನೂ ಕೇಳಿ.
ಆಗಾಗ್ಗೆ ತರಬೇತಿ ಕಾರ್ಯಾಗಾರ ಹಾಗೂ ಹಾಸ್ಯ ಚಟುವಟಿಕೆಗಳನ್ನು ಏರ್ಪಡಿಸಿ.