ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಕೊರೊನಾ ಲಸಿಕೆ ಹಾಕಿದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು. ಲಸಿಕೆ ಹಾಕಿಸಿಕೊಳ್ಳುವ ಮೊದಲು ಇದನ್ನು ತಿಳಿಯುವುದು ಅಗತ್ಯ.
ಕೊರೊನಾ ಲಸಿಕೆ ಹಾಕಿದ ನಂತ್ರ ಅದೇ ದಿನ ಕೆಲಸಕ್ಕೆ ಹೋಗಬೇಡಿ. ಲಸಿಕೆ ಹಾಕಿದ ನಂತ್ರ 2-3 ದಿನ ವಿಶ್ರಾಂತಿ ತೆಗೆದುಕೊಳ್ಳಿ. ಕೆಲವರಿಗೆ ಕೊರೊನಾ ಲಸಿಕೆ ಹಾಕಿದ ತಕ್ಷಣ ಅಡ್ಡಪರಿಣಾಮ ಕಾಣಿಸಿಕೊಂಡ್ರೆ ಮತ್ತೆ ಕೆಲವರಿಗೆ 24 ಗಂಟೆ ನಂತ್ರ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕೊರೊನಾ ಲಸಿಕೆ ಹಾಕಿದ ನಂತ್ರ ಕನಿಷ್ಠ ಎರಡು ದಿನ ಆರೋಗ್ಯದ ಬಗ್ಗೆ ಗಮನ ನೀಡಿ.
ಈಗಾಗಲೇ ಮೊದಲ ಲಸಿಕೆ ಹಾಕಿಕೊಂಡಿದ್ದರೆ ಸಾರ್ವಜನಿಕ ಪ್ರದೇಶಗಳಿಗೆ ಹೋಗಬೇಡಿ. ಎರಡನೇ ಲಸಿಕೆ ಹಾಕಿಕೊಳ್ಳುವವರೆಗೂ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಎರಡೂ ಲಸಿಕೆ ಬಿದ್ದ ನಂತ್ರವೂ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿ.
ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ ಯಾವುದೇ ಪ್ರವಾಸಕ್ಕೆ ಹೋಗಬೇಡಿ. ಕೊರೊನಾ ಸಂಖ್ಯೆ ಹೆಚ್ಚಾಗ್ತಿರುವ ಕಾರಣ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಪ್ರವಾಸಿ ಸ್ಥಳಗಳಿಗೆ ಹೋಗಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ ಮದ್ಯಪಾನ, ಧೂಮಪಾನದಿಂದ ದೂರವಿರಿ. ಯಾವುದೇ ಕಾರಣಕ್ಕೂ ಮೂರು ದಿನಗಳ ಕಾಲ ಮದ್ಯಪಾನ ಮಾಡಬೇಡಿ. ಹಾಗೆ ಹೊರಗಿನ ಆಹಾರವನ್ನು ಸೇವನೆ ಮಾಡಬೇಡಿ.
ಮೊದಲಿನಿಂದಲೂ ಆರೋಗ್ಯ ಸಮಸ್ಯೆಯಿದ್ದರೆ ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ ವೈದ್ಯರ ಸಂಪರ್ಕದಲ್ಲಿರಿ. ಯಾವುದೇ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಭೇಟಿಯಾಗಿ.
ಕೊರೊನಾ ಲಸಿಕೆ ಹಾಕುವ ಸಂದರ್ಭದಲ್ಲಿ ಹಾಗೂ ಹಾಕಿದ ನಂತ್ರ ದೇಹವನ್ನು ಹೈಡ್ರೀಕರಿಸಿ. ಹಣ್ಣು, ತರಕಾರಿ, ಒಣ ಹಣ್ಣುಗಳ ಸೇವನೆ ಮಾಡಿ.
ಕೊರೊನಾ ಲಸಿಕೆ ಹಾಕಿದ ನಂತ್ರ ವ್ಯಾಯಾಮ ಮಾಡಬೇಡಿ. ಕೊರೊನಾ ಲಸಿಕೆ ಹಾಕಿದ ಕೆಲ ದಿನ ವ್ಯಾಯಾಮ ಮಾಡಬೇಡಿ. ನಿಮ್ಮ ಕೈ ನೋವು ಇದ್ರಿಂದ ಹೆಚ್ಚಾಗುವ ಸಾಧ್ಯತೆಯಿದೆ.