ಮಳೆಗಾಲದಲ್ಲಿ ಬಟ್ಟೆಯಿಂದ ಕೆಟ್ಟ ವಾಸನೆ ಬರೋದು ಮಾಮೂಲಿ. ಮುಗ್ಗಿದಂತೆ ಬರುವ ವಾಸನೆಯಿಂದ ಕಿರಿಕಿರಿಯುಂಟಾಗುತ್ತದೆ. ಮಳೆಗಾಲದಲ್ಲಿ ಕೆಲವೊಂದು ಟಿಪ್ಸ್ ಅನುಸರಿಸಿದ್ರೆ ಬಟ್ಟೆಯಿಂದ ಬರುವ ವಾಸನೆಯನ್ನು ತಡೆಯಬಹುದು.
ಡಿಟರ್ಜೆಂಟ್ ಪೌಡರ್ ಗೆ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ. ನಂತ್ರ ಬಟ್ಟೆಯನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಬಟ್ಟೆ ವಾಸನೆಯಾಗುವುದಿಲ್ಲ.
ಒಣ ಸ್ಥಳದಲ್ಲಿ ಬಟ್ಟೆಯನ್ನು ಇಡಬೇಕು. ಮಳೆಯ ಹನಿ ಸೋಕುವ ಅಥವಾ ತೇವಾಂಶವಿರುವ ಜಾಗದಲ್ಲಿ ಬಟ್ಟೆಯಿಡಬೇಡಿ. ಕಪಾಟನ್ನು ಸ್ವಚ್ಛಗೊಳಿಸಿ ಅದ್ರಲ್ಲಿ ಬಟ್ಟೆಯನ್ನು ಇಡಿ.
ವಾಷಿಂಗ್ ಮಷಿನ್ ಒಳಗೆ ತೇವಗೊಂಡ ಬಟ್ಟೆ ಇರದಂತೆ ನೋಡಿಕೊಳ್ಳಿ. ಅನೇಕರು ತೇವಗೊಂಡ ಬಟ್ಟೆಗಳನ್ನು ವಾಷಿಂಗ್ ಮಷಿನ್ ಒಳಗೆ ಹಾಗ್ತಾರೆ. ಮಷಿನ್ ತುಂಬಿದ ನಂತ್ರ ತೊಳೆಯುತ್ತಾರೆ. ಮಳೆಗಾಲದಲ್ಲಿ ಈ ಐಡಿಯಾ ವರ್ಕ್ ಆಗುವುದಿಲ್ಲ. ಹೀಗೆ ಮಾಡಿದ್ರೆ ಬಟ್ಟೆ ವಾಸನೆ ಹೆಚ್ಚಾಗುತ್ತದೆ.
ಮಳೆಗಾಲದಲ್ಲಿ ಸೂರ್ಯ ಬರೋದು ಅಪರೂಪ. ಅಂತ ಜಾಗದಲ್ಲಿರುವವರು ಬಟ್ಟೆಯನ್ನು ಕೋಣೆಯಲ್ಲಿಯೇ ಒಣ ಹಾಕಿ. ಒದ್ದೆಯಾಗಿರುವ ಬಟ್ಟೆಯಿಂದ ಹೆಚ್ಚು ವಾಸನೆ ಬರುತ್ತದೆ.
ಬಟ್ಟೆ ತೊಳೆಯುವ ಮೊದಲು ಸುಮಾರು 15 ನಿಮಿಷಗಳ ಕಾಲ ಸೋಪಿನ ಪುಡಿಯಲ್ಲಿ ಬಟ್ಟೆಯನ್ನು ನೆನೆಸಿಡಿ. ನಂತ್ರ ಬಟ್ಟೆಯನ್ನು ತೊಳೆಯಿರಿ.