ವ್ಯಾಲಂಟೈನ್ ವೀಕ್ ನಡೆಯುತ್ತಿದೆ. ಫೆಬ್ರವರಿ 9ರಂದು ಚಾಕಲೇಟ್ ಡೇ ಆಚರಿಸಲಾಗ್ತಿದೆ. ಚಾಕಲೇಟ್ ನೀಡುವ ಮೂಲಕ ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರೀತಿ ಪಾತ್ರರು, ಸ್ನೇಹಿತರಿಗೆ ಚಾಕಲೇಟ್ ನೀಡುವುದು ಸಾಮಾನ್ಯ. ಆದ್ರೆ ಇದೇ ಚಾಕಲೇಟನ್ನು ಸ್ವಲ್ಪ ವಿಶೇಷವಾಗಿ ನೀಡಿ ಅವ್ರನ್ನು ಖುಷಿಪಡಿಸಬಹುದು.
ಉಡುಗೊರೆ ರೂಪದಲ್ಲಿ ಚಾಕಲೇಟ್ ನೀಡುವುದು ಸಾಮಾನ್ಯ. ಇಂದು ನೀವು ಇದನ್ನು ಸ್ವಲ್ಪ ವಿಶೇಷ ಮಾಡಲು ಬಯಸಿದ್ರೆ ಚಾಕಲೇಟ್ ಬೊಕ್ಕೆಯನ್ನು ಉಡುಗೊರೆಯಾಗಿ ನೀಡಬಹುದು.
ಚಾಕಲೇಟ್ ಬಾಕ್ಸ್ ಕೂಡ ನೀವು ಉಡುಗೊರೆಯಾಗಿ ನೀಡಬಹುದು. ಚಾಕಲೇಟ್ ಬಾಕ್ಸ್ ನಲ್ಲಿ ಚಾಕಲೇಟ್ ಜೊತೆ ಫೀಲಿಂಗ್ಸ್ ಬರೆದು ಕಳಿಸುತ್ತಾರೆ. ಆದ್ರೆ ಇದೆಲ್ಲದರ ಜೊತೆ ನಿಮ್ಮ ಪ್ರೀತಿ ಪಾತ್ರರಿಗೆ ಇಷ್ಟವಾಗುವ ಬೇರೆ ವಸ್ತುಗಳನ್ನು ಕೂಡ ನೀವು ಬಾಕ್ಸ್ ಗೆ ಹಾಕಿ ಕಳುಹಿಸಬಹುದು.
ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವುದು ಹೇಗೆ…? ಇಲ್ಲಿದೆ ಸಿಂಪಲ್ ಟಿಪ್ಸ್
ರೂಮನ್ನು ಚಾಕಲೇಟ್ ನಿಂದ ಕೂಡ ಸಿಂಗರಿಸಬಹುದು. ಚಾಕಲೇಟ್ ಹ್ಯಾಂಗ್ ಮಾಡುವ ಜೊತೆಗೆ ಬಣ್ಣದ ಬೆಳಕನ್ನು ಬೆಳಗಿಸಿ ರೂಮನ್ನ ಸಿಂಗಾರಗೊಳಿಸಿ ನಿಮ್ಮ ಸಂಗಾತಿಗೆ ಸರ್ಪ್ರೈಸ್ ನೀಡಬಹುದು. ಇದು ನಿಮ್ಮ ಸಂಗಾತಿಗೆ ಖುಷಿ ನೀಡುತ್ತದೆ. ಪ್ರೀತಿ ವ್ಯಕ್ತಪಡಿಸಲು ಅನೇಕ ವಿಧಾನವಿದೆ. ಮನಸ್ಸಿನಲ್ಲಿರುವ ಪ್ರೀತಿಯನ್ನು ಹೇಳಿಕೊಳ್ಳುವುದು ಕೂಡ ಬಹಳ ಮುಖ್ಯ. ಇದ್ಯಾವುದೂ ಸಾಧ್ಯವಿಲ್ಲವೆಂದ್ರೆ ಸಣ್ಣ ಚಾಕಲೇಟ್ ನೀಡಿಯಾದ್ರೂ ನಿಮ್ಮ ಸಂಗಾತಿಯನ್ನು ಖುಷಿಪಡಿಸಿ. ನಿಜವಾಗಿ ಪ್ರೀತಿ ಮಾಡುವವರು ಉಡುಗೊರೆ ಸಣ್ಣದಿರಲಿ, ದೊಡ್ಡದಿರಲಿ ಅದಕ್ಕೆ ಮಹತ್ವ ನೀಡುವುದಿಲ್ಲ.