ಹೆತ್ತವರಿಬ್ಬರೂ ಉದ್ಯೋಗಸ್ಥರಾದಾಗ, ನಾವು ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸುತ್ತಿದ್ದೇವೆಯೋ ಇಲ್ಲವೇ ಎಂಬ ಸಂಶಯ ಪೋಷಕರನ್ನು ಕಾಡುತ್ತದೆ. ಮಕ್ಕಳನ್ನು ಬೆಳೆಸುವ ಸಿಂಪಲ್ ಟಿಪ್ಸ್ ಗಳು ಇಲ್ಲಿವೆ ಕೇಳಿ.
ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ಮತ್ತು ಅಮ್ಮನೇ ಮೊದಲ ಗುರು ಎಂಬುದನ್ನು ಮರೆಯದಿರಿ. ಮಗು ಸರಿಯಾದ ಕೆಲಸ ಮಾಡಿದಾಗ ಅದನ್ನು ಪ್ರಶಂಶಿಸಿ. ಸ್ವತಂತ್ರವಾಗಿ ಕೆಲಸ ಮಾಡಲು ಹೇಳಿಕೊಡಿ.
ಸಮಯ ಸಿಕ್ಕಾಗ ನೀವು ಈ ದಿನವನ್ನು ನಿಮ್ಮ ಮಗುವಿನೊಂದಿಗೆ ಹೇಗೆ ಕಳೆದಿರಿ ಎಂಬುದನ್ನು ಊಹಿಸಿ ನೋಡಿ. ಮಗುವನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚು ಸಮಯವನ್ನು ಬೈಯಲು ಕಳೆದಿರುವುದು ನಿಮಗೇ ಬೇಸರ ತರುತ್ತದೆ.
ಮುಖ ಮಾತ್ರವಲ್ಲ ಕತ್ತಿನ ʼಸೌಂದರ್ಯʼವೂ ಮುಖ್ಯ
ಮನೆಯನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂಬುದರಿಂದ ಆರಂಭಿಸಿ ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ತನಕ ಎಲ್ಲವನ್ನೂ ಹೇಳಿಕೊಡಿ. ಶಿಸ್ತಿನ ವಿಷಯದಲ್ಲಿ ಸ್ಟ್ರಿಕ್ಟ್ ಆಗಿರಿ.
ಮಕ್ಕಳೊಂದಿಗೆ ಕಳೆಯಲೆಂದು ಸ್ವಲ್ಪ ಸಮಯ ಮೀಸಲಿಡಿ. ಸ್ವಲ್ಪ ದೂರ ವಾಕಿಂಗ್ ಮಾಡಿ, ಅವರಿಗೆ ನೀವೇ ರೋಲ್ ಮಾಡೆಲ್ ಎಂಬುದನ್ನು ಮರೆಯದಿರಿ.