ಕೃತಕ ಬುದ್ಧಿಮತ್ತೆ ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕೃತಕ ಬುದ್ಧಿಮತ್ತೆ ಬಗ್ಗೆ ಸಂಶೋಧನೆಗಳು ತೀವ್ರಗೊಂಡಿವೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಅನೇಕ ಕೆಲಸಗಳು ಸುಲಭಗೊಂಡಿವೆ. ಈಗ ಸಂಶೋಧಕರು ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಸಾಮಾನ್ಯವಾಗಿ ಮನುಷ್ಯನ ಹುಟ್ಟು, ಸಾವಿನ ಬಗ್ಗೆ ಹೇಳೋದು ಕಷ್ಟ. ರೋಗದಿಂದ ಬಳಲುತ್ತಿರುವ ವ್ಯಕ್ತಿ ಅದೇ ರೋಗದಿಂದ ಸಾಯ್ತಾನೆ ಎನ್ನಲು ಸಾಧ್ಯವಿಲ್ಲ. ಬೇರೆ ಕಾರಣ ಆತನ ಸಾವಿಗೆ ಕಾರಣವಾಗಬಹುದು. ಸಾವಿಗೆ ಏನು ಕಾರಣವಾಗಬಹುದು ಎಂಬುದನ್ನು ಸಂಶೋಧಕರು ಕಂಡು ಹಿಡಿಯುವ ಪ್ರಯತ್ನ ನಡೆಸಿದ್ದಾರೆ.
ಒಂದು ಸಂಶೋಧನೆಯ ಪ್ರಕಾರ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟ್ಯಾಂಡರ್ಡ್ ಇಸಿಜಿ ಪರೀಕ್ಷೆಯ ಸಹಾಯದಿಂದ ಯಾವುದೇ ರೋಗಿಯ ಸಾವಿನ ಕಾರಣವನ್ನು ಒಂದು ವರ್ಷದೊಳಗೆ ಹೇಳಬಹುದು. ಪೆನ್ಸಿಲ್ವೇನಿಯಾದ ಗಿಸ್ಸಿಂಗರ್ ಹೆಲ್ತ್ ಸಿಸ್ಟಂನ ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 40000 ರೋಗಿಗಳಿಗೆ 1.77 ಮಿಲಿಯನ್ ಇಸಿಜಿ ಟೆಸ್ಟ್ ನ ಪರೀಕ್ಷೆಯ ವಿಶ್ಲೇಷಣೆ ಮಾಡಿದ್ದಾರೆ. ಇದ್ರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುತ್ತಿದೆ. ಸಂಶೋಧನೆ ಪೂರ್ಣಗೊಂಡ ನಂತ್ರ ಇದ್ರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.